ಕೆಲವು ದಿನಗಳ ಹಿಂದೆಯಷ್ಟೇ ನಟ ಸತೀಶ್ ನೀನಾಸಂ ಸೋಷಿಯಲ್ ಮೀಡಿಯಾದಲ್ಲಿ ದೇಹ ಹುರಿಗೊಳಿಸಿಕೊಂಡ ಫೋಟೋವೊಂದನ್ನು ಹಂಚಿಕೊoಡಿದ್ದರು. ಜಿಮ್ನಲ್ಲಿ ನಿಂತು ತೆಗೆಸಿಕೊಂಡಿದ್ದ ಆ ಫೋಟೋ ಸಖತ್ ವೈರಲ್ ಕೂಡ ಆಗಿತ್ತು. ಅಭಿಮಾನಿಗಳಲ್ಲಿ ಅಚ್ಚರಿ ಕೂಡ ಮೂಡಿಸಿತ್ತು.
ಸತೀಶ್ ಯಾಕಾಗಿ ಈ ಕಸರತ್ತು ನೆಡೆಸಿದ್ದಾರೆ ಎಂಬ ಕುತೂಹಲ ಕೂಡ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇನ್ನೇನು ರಿಲೀಸ್ಗೆ ಸಿದ್ಧವಾಗಿರುವ ಗೋಧ್ರಾ ಸಿನಿಮಾದ ಹಾಡೊಂದರ ಚಿತ್ರೀಕರಣ ಸದ್ಯದಲ್ಲೇನಡೆಯಲಿದ್ದು, ಈ ಸಾಂಗ್ಗಾಗಿ ಸತೀಶ್ ಬೆವರಿಳಿಸಿದ್ದಾರೆ. ಅದೊಂದು ವಿಶೇಷ ಗೀತೆಯಾಗಿದ್ದರಿಂದ, ಈ ತಯಾರಿ ನಡೆಸಿದ್ದಾರೆ.
ದೇಹ ಹುರಿಗೊಳಿಸುವುದು ಸಾಮಾನ್ಯ ಸಂಗತಿ ಏನಲ್ಲ. ಅದಕ್ಕಾಗಿ ಏನೆಲ್ಲ ತ್ಯಾಗ ಮಾಡಬೇಕು. ನಾನಾ ರೀತಿಯ ಕಸರತ್ತುಗಳನ್ನೂ ನೆಡೆಸಬೇಕು. ಈ ಕುರಿತು ಸ್ವತಃ ಅವರೇ ಮಾತನಾಡಿದ್ದಾರೆ.”ಗೋಧ್ರಾದ ಹಾಡೊಂದರ ಚಿತ್ರೀಕರಣಕ್ಕಾಗಿ ಈ ತಯಾರಿ ಮಾಡಿಕೊಳ್ಳಲೇಬೇಕಿತ್ತು. ಅಲ್ಲದೇ, ಇದು ಸಿಕ್ಸ್ಪ್ಯಾಕ್ ಮಾಡಿಕೊಳ್ಳಲು ಮಾಡಿದ್ದಲ್ಲ. ದೇಹದ ಆರೋಗ್ಯದ ಬಗ್ಗೆ ನಾನು ಸದಾ ಕಾಳಜಿ ಹೊಂದಿರುತ್ತೆನೆ.
ಪಾತ್ರಕ್ಕಾಗಿ ನಾನು ಯಾವ ರೀತಿ ತಯಾರಿಗೂ ಸಿದ್ಧ ಧೇಹ ಹುರಿಗೊಳಿಸಿಕೊಳ್ಳುವುದು ಅಂದರೆ, ಅದೊಂದು ವಿಶೇಷ ಅನುಭವ. ಈ ಹಾದಿಯಲ್ಲಿ ನಾನು ಫಿಟ್ ಆಗಿದ್ದೇನೆ. ಮತ್ತಷ್ಟು ಯಂಗ್ ಆಗಿ ಕಾಣುತ್ತಿದ್ದೇನೆ” ಎಂದರು. ಹಲವು ವಷಗಳಿದ ಇವರಿಗೆ ಟ್ರೈನ್ ಮಾಡುತ್ತಿವ ಶಾಮ್ ರಾಬರ್ಟ್ ಅವರ ಮಾಗದಶನದಲ್ಲಿ ಇದೆಲ್ಲ ಕಸರತ್ತು ಮಾಡುತ್ತಿದ್ದಾರೆ. “ದಿನಕ್ಕೆ ಕನಿಷ್ಠ ಐದು ಕೀಲೋ ಮೀಟರ್ ಓಡುತ್ತೇನೆ. ಎರಡು ಬಾರಿ ಜಿಮ್ ಮಾಡುತ್ತೇನೆ.
ಈ ಹಿಂದೆ ಅಯೋಗ್ಯ ಸಿನಿಮಾದ ಸಾಹಸ ಸನ್ನಿವೇಶಕ್ಕೆ ಶ್ಯಾಮ್ ರಾಬರ್ಟ್ ಅವರ ನನ್ನನ್ನು ಸಖತ್ತಾಗಿ ತಯಾರಿ ಮಾಡಿದ್ದರು. ಅದರ ನೆಕ್ಸಸ್ಟ್ ಲೇವಲ್ ತಯಾರಿ ಇದಾಗಿದೆ” ಎಂದರು ಸತೀಶ್.
“ನಿತ್ಯವೂ ವ್ಯಾಯಾಮ ಮಾಡುವುದರ ಜತೆಗೆ ಆಹಾರ ಸೇವಿಸುವುದರಲ್ಲೂ ಕಟ್ಟುನಿಟ್ಟಾಗಿದ್ದೇನೆ. ಎರಡೂವರೆ ತಿಂಗಳಿ0ದ ನನ್ನ ನೆಚ್ಚಿನ ಅನೇಕ ತಿಂಡಿ ತಿನಿಸುಗಳನ್ನು ಬಿಟ್ಟಿದ್ದೇನೆ. ಅನ್ನ ತಿನ್ನಲ್ಲ. ಸಕ್ಕರೆಯಿಂದ ದೂರ. ಓಟ್ಸ್, ಹಣ್ಣುಗಳು, ತರಕಾರಿ, ಮೊಟ್ಟೆ ಮತ್ತು ಪೋಷಕಾಂಶಯುಕ್ತ ಮಾಂಸ ತಿನ್ನಲು ಹೇಳಿದ್ದಾರೆ. ದಿನಕ್ಕೆ ಐದು ಬಾರಿ ಅಳೆದು ತೂಗಿ ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಈ ಎಲ್ಲ ಶಿಸ್ತು ನನಗೆ ಸಹಕಾರಿಯಾಗಿವೆ’ ಎನ್ನುವುದು ಸತೀಶ್ ಮಾತು.
ಈ ಎಲ್ಲ ಕಾರಣಗಳಿಂದಾಗಿಯೇ ಸತೀಶ್ ಮತ್ತಷ್ಟು ಯಂಗ್ ಲುಕ್ನಲ್ಲಿ ಕಾಣಿಸುತ್ತಿದ್ದಾರೆ. ಈ ತಯಾರಿಗಾಗಿಯೇ ಅವರು ಮೂರು ತಿಂಗಳುಗಳ ಕಾಲ ಮೀಸಲಾಗಿಟ್ಟಿದ್ದರು. “ನಾನು ಅಂದುಕೊoಡoತಹ ಲುಕ್ ಬರಬೇಕು ಎಂದರೆ ಇನ್ನೂ ಒಂದು ತಿಂಗಳ ಕಾಲ ಸತತ ಕಸರತ್ತು ನೆಡೆಸಬೇಕು. ಮೊದ ಮೊದಲ ಕಷ್ಟ ಆಗೋದು. ಈಗ ಅದಕ್ಕೆ ಹೊಂದಿಕೊoಡಿದ್ದೇನೆ. ಎಷ್ಟೇ ಬಿಝಿ ಆಗಿದ್ದರೂ, ವ್ಯಾಯಾಮ ಮಾಡುವುದನ್ನು ಬಿಡುವುದಿಲ್ಲ. ಒಂದು ರೀತಿಯಲ್ಲಿ ಅದು ಅಭ್ಯಾಸವಾಗಿ ಹೋಗಿದೆ. ಹಾಗಾಗಿ ನನ್ನ ದೇಹಕ್ಕೊಂದು ಹೊಸ ಆಕಾರ ಸಿಕ್ಕಿದೆ. ಅದು ಅಭಿಮಾನಿಗಳಿಗೂ ಇಷ್ಟವಾಗಿದೆ.
ನಾನು ಏನೇ ಕಷ್ಟ ಪಟ್ಟರು ಅದು ಅಭಿಮಾನಿಗಳಿಗಾಗಿ ಎಂದರು ಸತೀಶ್. ಅಂದಹಾಗೆ ಗೋಧ್ರಾ ಸಿನಿಮಾದಲ್ಲಿ ಹೋಸ ಬಗೆಯ ಪಾತ್ರ ಮಾಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಸಿನಿಮಾ ಫಸ್ಟ್ ಲುಕ್ ಭರವಸೆಯನ್ನೂ ಮೂಡಿಸಿದೆ. ಸತೀಶ್ ಜತೆ ನಾಯಕಿಯಾಗಿ ಶ್ರಧಾ ಶ್ರೀನಾಥ್ ನಟಿಸಿದ್ದಾರೆ. ಅಚ್ಯುತ್ಕುಮಾರ್, ವಸಿಷ್ಠ ಸಿಂಹ ಸೇರಿದಂತೆ ಅನುಭವಿ ಕಲಾವಿದರ ಬಳಗವೇ ಸಿನಿಮಾದಲ್ಲಿದೆ. ನಂದೀಶ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಲೀಡರ್ ಫಿಲ್ಮ್ ಪ್ರೋಡಕ್ಷನ ಈ ಸಿನಿಮಾವನ್ನು ನಿಮಾಣ ಮಾಡಿದೆ.
Pingback: game slot
Pingback: Buy Sex Toys Online