Sathish: ಮಂಡ್ಯದ ಮತದಾನ ಜಾಗೃತಿ ರಾಯಭಾರಿಯಾಗಿ ಸತೀಶ್ ನೀನಾಸಂ

ಸತೀಶ್ ನೀನಾಸಂ ಅವರನ್ನು ಚುನಾವಣಾ ಆಯೋಗ ಮಂಡ್ಯ ಜಿಲ್ಲಾ ಮತದಾನ ಜಾಗೃತಿ ರಾಯಭಾರಿಯನ್ನಾಗಿ ನೇಮಿಸಿದೆ.

ಅತೀ ಹೆಚ್ಚು ಮತದಾನ ಆಗುವ ಉದ್ದೇಶದಿಂದ ಚುನಾವಣಾ ಆಯೋಗ, ಮಂಡ್ಯ ಜಿಲ್ಲೆಯವರೇ ಆದ ಸತೀಶ್ ಅವರನ್ನು ಮಂಡ್ಯ ಜಿಲ್ಲಾ ಮತದಾನ ಜಾಗೃತಿ ರಾಯಭಾರಿಯನ್ನಾಗಿ ನೇಮಿಸಿ ಜಾಗೃತಿ ಕಾರ್ಯಕ್ರಮವನ್ನು ಆರಂಭ ಮಾಡಿದೆ.

ಮಂಡ್ಯದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾದ ಸತೀಶ್ ನೀನಾಸಂ , ‘ಜಾತಿ, ಮತ, ಕುಲ ಯಾವುದನ್ನೂ ಲೆಕ್ಕಿಸದೇ, ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕ ವ್ಯಕ್ತಿಗಳಿಗೆ ಮತದಾನ ಮಾಡಬೇಕು. ಮತದಾನ ಅಮೂಲ್ಯವಾದದ್ದು. ಅದನ್ನು ಮಾರಿಕೊಳ್ಳಬೇಡಿ. ಹಾಳು ಮಾಡಬೇಡಿ’ ಎಂದು ಕರೆ ನೀಡಿದರು.

ಜನರಿಗೆ ಮತದಾನದ ಶಕ್ತಿಯನ್ನು ಅರಿವು ಮಾಡಿಕೊಟ್ಟ ಸತೀಶ್ ಅವರು, ‘ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗಿಯಾಗಬೇಕು. ನಾನ್ಯಾಕೆ ಮತದಾನ ಮಾಡಬೇಕು ಎಂದು ಆಲೋಚಿಸುವ ಬದಲು, ಮತದಾನ ಮಾಡಿದರೆ ಎಂಥ ರಾಷ್ಟ್ರವನ್ನು ಕಟ್ಟಬಹುದು ಎನ್ನುವುದರತ್ತ ಯೋಚಿಸಬೇಕು. ರಾಜ್ಯದಲ್ಲೇ ಮಂಡ್ಯದಲ್ಲಿ ಅತೀ ಹೆಚ್ಚು ಮತದಾನ ಆಗುವಂತೆ ಮಾಡಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ ಆಗಿದೆ’ ಎಂದು ಹೇಳಿದರು.

ರಾಜ್ಯ ವಿಧಾನ ಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಿದೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!