ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಸಮಾಜ ತಿದ್ದುವ ‘ಸಮರ್ಥ’

ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಸಮಾಜ ತಿದ್ದುವ ‘ಸಮರ್ಥ’

ಸ್ಯಾಂಡಲ್‍ವುಡ್‍ನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಅಬ್ಬರ ಜೋರಾಗಿದೆ. ಪ್ರೇಕ್ಷಕನನ್ನು ರಂಜಿಸಲು ರೋಚಕ ಕಥಾಹಂದರ ಹೊಂದಿರುವ ಚಿತ್ರಗಳು ಒಂದರ ಹಿಂದೆ ಒಂದು ಬರುತ್ತಿವೆ. ಈ ಸಾಲಿಗೆ ‘ಸಮರ್ಥ’ ಎಂಬ ಹೊಸಬರ ಸಿನಿಮಾ ಕೂಡ ಸೇರ್ಪಡೆಗೊಂಡಿದೆ. ‘ಸರ್ವ ಕ್ರಿಯೇಷನ್ಸ್’ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ಎಸ್.ಜಿ.ಆರ್ ಪಾವಗಡ ಕಥೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಜೊತೆಜೊತೆಗೆ ಸಮಾಜಕ್ಕೆ ಸಂದೇಶ ನೀಡುವ ಅಂಶಗಳನ್ನು ಒಳಗೊಂಡಿದೆಯಂತೆ. ರವಿ ಶಿರೂರ್ ಹಾಗೂ ರಚನಾ ದಶ್ರತ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ, ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅಭಿಮಾನ್ ರಾಯ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಶಿಲ್ಪಾ ಮಧುಸೂಧನ್, ಅಭಿಮಾನ್, ಮಾರ್ಗರೇಟ್ ರೀಟಾ, ಸರಿಗಮಪ ಖ್ಯಾತಿಯ ಮೆಹಬೂಬ್ ಮುಂತಾದವರು ಹಾಡಿದ್ದಾರೆ. ಯಲ್ಲಪ್ಪ ಕುಸುಮ ಪ್ರಿಯ, ವಿಜಯಾ ರೆಡ್ಡಿ, ವಿಘ್ನೇಶ್ವರ ವಿಶ್ವ ಸಾಹಿತ್ಯ ಬರೆದಿದಾರೆ. ಎಸ್.ಸಿ. ಮಹೇಂದ್ರ ಛಾಯಾಗ್ರಹಣ, ರಿಕ್ಕಿ ಸ್ವಾಮಿ ಸಂಕಲನಕರಾಗಿ ಕೆಲಸ ಮಾಡಿದ್ದಾರೆ. ಕಳೆದ ವಾರ ಸಮರ್ಥ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಚಿತ್ರದ ಎಲ್ಲಾ ಹಾಡುಗಳು ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿವೆ. ಈಗಾಗಲೇ ಟ್ರೈಲರ್ ಮೂಲಕ ಭಾರೀ ಕುತೂಹಲ ಹುಟ್ಟಿಸಿರುವ ಸಮರ್ಥ ಸಿನಿಮಾ, ಕೆಲವೇ ದಿನಗಳಲ್ಲಿ ನಿಮ್ಮ ನೆಚ್ಚಿನ ಚಿತ್ರಮಂದಿರಗಳಿಗೆ ಎಂಟ್ರಿ ಕೊಡಲಿದೆ. ಇನ್ನು ‘ಸಮರ್ಥ’ ಶೀರ್ಷಿಕೆ ಹುಟ್ಟಿದ್ದು, ಹೇಗೆ..? ಅದರ ವಿಶೇಷತೆ ಏನು ಅನ್ನೋದರ ಬಗ್ಗೆ ನಿರ್ದೇಶಕರು ಹೇಳುವುದು ಹೀಗೆ.
ಜೀವನದ ಸಂಕಷ್ಟಗಳನ್ನು ಮೆಟ್ಟಿ ನಿಲ್ಲುವವನೇ ‘ಸಮರ್ಥ

ರವಿ ಶಿರೂರ್, ನಾಯಕ
‘ಫಸ್ಟ್ ಮೀಟ್.. ಡೈರೆಕ್ಟ್ ಟು ಶೂಟಿಂಗ್ ಸ್ಪಾಟ್’
ರಚನಾ ದಶರತ್, ನಾಯಕಿ
ನಿರ್ದೇಶಕ ಮರಡಹಳ್ಳಿ ನಾಗಚಂದ್ರ ಅವರ ಮೂಲಕ ಎಸ್.ಜಿ.ಆರ್ ಸರ್ ಅವರ ಪರಿಚಯ ಆಯಿತು. ಫಸ್ಟ್ ಮೀಟ್‍ನಲ್ಲಿ ಜಾಸ್ತಿ ಮಾತುಕತೆ ಏನು ಆಗಲಿಲ್ಲ. ‘ಫಸ್ಟ್ ಮೀಟ್.. ಡೈರೆಕ್ಟ್ ಟು ಶೂಟಿಂಗ್ ಸ್ಪಾಟ್’ ಎನ್ನುವ ಹಾಗೆ ಆಯಿತು. ಎಸ್.ಜಿ.ಆರ್ ಸರ್ ತುಂಬಾ ಟ್ಯಾಲೆಂಟೆಡ್ ನಿರ್ದೇಶಕ. ಅವರು ಹೇಳುವ ಸಿನಿಮಾ ಕಥೆಯನ್ನು ಆಡಿಯನ್ಸ್ ಆಗಿ ಕೇಳುತ್ತಿದ್ದೆ. ಆಗ ನನ್ನಲ್ಲೇ ಒಂದು ರೀತಿಯ ರೋಮಾಂಚನ, ಮುಂದೆ ಏನಾಗುತ್ತೆ ಎಂಬ ಕುತೂಹಲ ಉಂಟಾಗುತ್ತಿತ್ತು. ಅವರ ಜೊತೆ ಕೆಲಸ ಮಾಡಿದ್ದು ನನ್ನ ಸಿನಿಮಾ ಬದುಕಿಗೆ ಒಳ್ಳೆಯ ಅನುಭವ ನೀಡಿದೆ. ಹಿರೋ ರವಿ ಶಿರೂರು ತುಂಬಾ ಅದ್ಭುತವಾಗಿ ಅಭಿನಯಿಸಿದ್ದಾರೆ. ಅಷ್ಟೇ ಚೆನ್ನಾಗಿ ಫೈಟ್ ಕೂಡ ಮಾಡಿದ್ದಾರೆ. ಅವರ ಜೊತೆ ನಟಿಸಿದ್ದಕ್ಕೆ ತುಂಬಾ ಖುಷಿ ಇದೆ. ಮೊದಲು ಹೊಸ ಟೀಂ ಜೊತೆ ಕೆಲಸ ಮಾಡುವುದು ಹೇಗೆ ಅಂತ ಭಯ ಶುರುವಾಗಿತ್ತು. ಕ್ರಮೇಣ ಎಲ್ಲರ ಜೊತೆಯೂ ಆತ್ಮೀಯತೆ ಬೆಳೆದು 30ರಿಂದ 40 ದಿನಗಳ ಚಿತ್ರೀಕರಣ, ಮಗಿದು ಹೋದದ್ದೇ ಗೊತ್ತಾಗಲಿಲ್ಲ. ಓವರ್ ಆಲ್ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಹಾಡುಗಳಂತೂ ಒಂದಕ್ಕಿಂತ ಒಂದು ಚೆನ್ನಾಗಿವೆ. ಮಲೆನಾಡಿನ ಪ್ರಕೃತಿ ಸೌಂದರ್ಯದ ಮೋಹಕ ತಾಣಗಳಲ್ಲಿ ಶೂಟಿಂಗ್ ನಡೆಯಿತು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಆಡಿಯನ್ಸ್ ಇಷ್ಟ ಆಗುವ ಎಲ್ಲಾ ಬಗೆಯ ಅಂಶಗಳನ್ನು ಒಳಗೊಂಡಿರುವ ಸಿನಿಮಾ.

– ನಿರ್ದೇಶಕ – ಎಸ್.ಜಿ.ಆರ್ ಪಾವಗಡ
ಜೀವನದಲ್ಲಿ ದಿನಕ್ಕೊಂದು ಪರೀಕ್ಷೆ, ಕ್ಷಣಕ್ಕೊಂದು ತಿರುವು ಎದುರಾಗುತ್ತವೆ. ಇವೆಲ್ಲವುಗಳನ್ನು ಮೆಟ್ಟಿ ನಿಲ್ಲುವ ಮನುಷ್ಯನೇ ಸಮರ್ಥ. ಹೀಗಾಗಿ ಸಮರ್ಥ ಎಂಬ ಶೀರ್ಷಿಕೆ ನಮ್ಮ ಚಿತ್ರಕ್ಕೆ ಹೆಚ್ಚು ಸೂಕ್ತ ಎನಿಸಿತು. ಇದೊಂದು ಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾ. ಸಾಗರ, ತೀರ್ಥಹಳ್ಳಿ, ಹೊನ್ನಾವರ, ಅಪ್ಸರಕೊಂಡಾ ಮುಂತಾದ ಮೋಹಕ ತಾಣಗಳಲ್ಲಿ ಚಿತ್ರೀಕರಣವಾಗಿದ್ದು, ಪ್ರತಿಯೊಂದು ದೃಶ್ಯವು ಕಾವ್ಯಾತ್ಮಕವಾಗಿ ಮೂಡಿಬಂದಿವೆ.

 

 

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!