ರಾಜಕೀಯ ಮುತ್ಸದ್ಧಿ ಎಸ್ ಎಂ ಕೃಷ್ಣ ಹಾಗೂ ನಟಿ ಬಿ ಸರೋಜಾದೇವಿ ನಡುವೆ ಪ್ರೇಮಾಂಕರ ಆಗಿದ್ದು ಬಹಿರಂಗ ಆಗುವ ಮೂಲಕ ಭಾರೀ ಚರ್ಚೆ ಉಂಟು ಮಾಡಿತ್ತು.
ರಾಜಕಾರಣಿ ಎಚ್.ವಿಶ್ವನಾಥ್ ಅವರು, ಅವರ ಆತ್ಮಕಥನ “ಹಳ್ಳಿ ಹಕ್ಕಿಯ ಹಾಡು” ಪುಸ್ತಕದಲ್ಲಿ ಎಸ್.ಎಂ ಕೃಷ್ಣ ಹಾಗೂ ಬಿ. ಸರೋಜಾ ದೇವಿ ಅವರ ಪ್ರೇಮ ಪ್ರಸಂಗದ ಬಗ್ಗೆ ಉಲ್ಲೇಖಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸರೋಜಾ ದೇವಿ ಅವರು ಈ ವಿಷಯವನ್ನು ಪ್ರಸ್ತಾಪಿಸದ್ದಕ್ಕೆ ಗರಂ ಆಗಿದ್ದರು.
ಇನ್ನೂ ಹಳ್ಳಿ ಹಕ್ಕಿ ಹಾಡು ಪುಸ್ತಕದ ಬಗ್ಗೆ ವಿವಾದ ಎದ್ದಾಗ, ಎಸ್.ಎಂ.ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದರು. ಆಗ ಎಸ್.ಎಂ.ಕೃಷ್ಣ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಗ ಎಸ್.ಎಂ. ಕೃಷ್ಣ ಅವರ ಪತ್ನಿ ಪ್ರೇಮಾ ಅವರು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.
ಪ್ರೇಮಾ ಕೃಷ್ಣ’ ಬಿ.ಸರೋಜಾದೇವಿ ಅವರನ್ನು ಎಸ್.ಎಂ.ಕೃಷ್ಣ ಅವರ ಜೊತೆ ಮದುವೆ ಮಾಡುವ ಪ್ರಸ್ತಾಪ ಬಂದಿತ್ತು. ಆದರೆ, ಎಸ್.ಎಂ.ಕೃಷ್ಣ ಮನೆಯಲ್ಲಿ ಸಿನಿಮಾ ಹಿನ್ನಲೆಯವರನ್ನು ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಲು ಹಿರಿಯರು ಒಪ್ಪಲಿಲ್ಲ. ಅಲ್ಲಿಗೆ ಈ ವಿಷಯ ಮುಗಿಯಿತು. ನಂತರ ಮುಂದುವರಿಯಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.
ಕೃಷ್ಣ ಕುಟುಂಬ ಹಾಗೂ ಸರೋಜಾದೇವಿ ಕುಟುಂಬಗಳ ನಡುವೆ ಪ್ರಾಥಮಿಕ ಮಾತುಕತೆ ನಡೆದಿದೆ. ಆದರೆವಿವಾಹಕ್ಕೆ, ಇಬ್ಬರ ಕುಟುಂಬಗಳಲ್ಲಿ ಒಪ್ಪಿಗೆ ಸಿಗಲಿಲ್ಲ. ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ಬಿ.ಸರೋಜಾದೇವಿ ಅವರನ್ನು ತಮ್ಮ ಮನೆಗೆ ಸೊಸೆಯನ್ನಾಗಿ ಮಾಡಿಕೊಳ್ಳಲು ಎಸ್.ಎಂ.ಕೃಷ್ಣ ಕುಟುಂಬದ ಹಿರಿಯರು ಕೂಡ ಒಲವು ತೋರಲಿಲ್ಲ. ಹೀಗಾಗಿ ಬಿ.ಸರೋಜಾ ದೇವಿ ಹಾಗೂ ಎಸ್.ಎಂ.ಕೃಷ್ಣ ನಡುವೆ ವಿವಾಹ ಸಂಬಂಧ ಏರ್ಪಡಲಿಲ್ಲ ಎಂದು ಕೃಷ್ಣ ಸೋದರ ಎಸ್. ಎಂ. ಶಂಕರ್ ಹಿಂದೆ ಹೇಳಿದ್ದರು.
ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಎಸ್.ಎಂ. ಕೃಷ್ಣ ಯುವ ನಾಯಕರಾಗಿದ್ದಾಗ, ಬಿ. ಸರೋಜಾದೇವಿ ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದ ಖ್ಯಾತ ನಟಿಯಾಗಿ ಬೆಳೆದಿದ್ದರು. ಸರೋಜಾದೇವಿ ಅವರ ಸೌಂದರ್ಯ ಮತ್ತು ಅಭಿನಯ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿತ್ತು. ಎಸ್ ಎಂ ಕೃಷ್ಣ ಮತ್ತು ಸರೋಜಾದೇವಿ ಅವರ ನಡುವೆ ಪ್ರೇಮಾಂಕುರವಾಗಿತ್ತು, ಈ ವಿಷಯ ನಂತರ ಮುರಿದು ಬಿದ್ದಿದ್ದು ಇತಿಹಾಸ.
——





Be the first to comment