ಜೆ. ಆಚಾರ್ ನಿರ್ದೇಶನ ಮಾಡಿರುವ ‘ಸಾರಂಗಿ’ ಕನ್ನಡ ಸಿನಿಮಾವನ್ನು ಮೊದಲು ಅಮೆರಿಕದಲ್ಲಿ ಬಿಡುಗಡೆ ಮಾಡಿ ನಂತರ ಅಕ್ಟೋಬರ್ ವೇಳೆಗೆ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಲಾಗಿದೆ.
‘ಸಾರಂಗಿ’ ಸಿನಿಮಾದಲ್ಲಿ ಇರುವುದು ಕೇವಲ ಎರಡೇ ಪಾತ್ರಗಳು. ಸಿನಿಮಾದಲ್ಲಿ ಕಾರ್ತಿಕ್ ಚಂದರ್ ಮತ್ತು ಶ್ವೇತಾ ಅರೆಹೊಳೆ ಅವರು ನಟಿಸಿದ್ದಾರೆ. ಕಾರ್ತಿಕ್ ಚಂದರ್ ನಾಯಕನಾಗಿ ನಟಿಸುವ ಜೊತೆಗೆ ಕಾರ್ಯಕಾರಿ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ.

‘ಮನುಷ್ಯ ಎಲ್ಲರ ಮುಂದೆ ಒಂದೊಂದು ರೀತಿಯ ಮುಖವಾಡ ಧರಿಸಿ ಜೀವನ ಮಾಡುತ್ತಾನೆ. ಒಂದು ಅನಿರೀಕ್ಷಿತ ಸನ್ನಿವೇಶ ಎದುರಾದಾಗ ನಮ್ಮ ಮೌಲ್ಯಗಳನ್ನು ಉಳಸಿಕೊಳ್ಳುತ್ತೇವ? ಅದರಿಂದ ಹೇಗೆ ಪಾರಾಗುತ್ತೇವೆ ಎಂಬುದೇ ಈ ಸಿನಿಮಾದ ಕಥಾಸಾರಾಂಶ. ಸಾರಂಗಿ ಅಂದರೆ ಒಂದು ಬೆಟ್ಟದ ಹೆಸರು. ಬೆಟ್ಟದ ಸುತ್ತ ಏನೆಲ್ಲ ನಡೆಯುತ್ತದೆ ಎಂಬುದನ್ನು ನಿರ್ದೇಶಕರು ಇದರಲ್ಲಿ ತೋರಿಸಿದ್ದಾರೆ’ ಎಂದು ಕಾರ್ತಿಕ್ ಚಂದರ್ ಹೇಳಿದ್ದಾರೆ.
‘ನಾನು ಮೂಲತಃ ಮಂಗಳೂರಿನವಳು. ರಂಗಭೂಮಿ ಕಲಾವಿದೆ. ಜೊತೆಗೆ ಭರತನಾಟ್ಯ ಕಲಾವಿದೆ ಕೂಡ ಹೌದು. ಈ ಚಿತ್ರದ ಕಥೆ ಹಾಗೂ ನನ್ನ ಪಾತ್ರ ಎರಡು ಸಹ ಚೆನ್ನಾಗಿದೆ’ ಎಂದಿದ್ದಾರೆ ಶ್ವೇತಾ ಅರೆಹೊಳೆ.
ಜೆ. ಆಚಾರ್ ಅವರು ‘ಸಾರಂಗಿ’ ಸಿನಿಮಾಗೆ ನಿರ್ದೇಶನ ಮಾಡಿ ಕಥೆ ಕೂಡ ಬರೆದಿದ್ದಾರೆ. ತೇಜೇಶ್ ಅವರು ಸಿನಿಮಾವನ್ನು ನಿರ್ಮಿಸಿದ್ದಾರೆ. ನವಿ ನಂಜಪ್ಪ ಅವರು ಛಾಯಾಗ್ರಹಣ, ಸೌಂಡ್ ಡಿಸೈನರ್ ಆಗಿ ಸ್ಯಾಮ್ ಕಪ್ಪರ್, ದುಶ್ಯಂತ್ ರೈ ಸಹ ನಿರ್ದೇಶಕರಾಗಿದ್ದಾರೆ. ಸಿನಿಮಾದಲ್ಲಿ ಮಿಸ್ಟಿಕ್ ಥ್ರಿಲ್ಲರ್ ಕಥಾಹಂದರ ಇದೆ.





Pingback: ordering androxal purchase from canada
Pingback: ordering enclomiphene spain over the counter
Pingback: purchase xifaxan uk delivery
Pingback: how to order staxyn price netherlands
Pingback: dutasteride no script needed cod overnight
Pingback: fildena at discount price
Pingback: kamagra dodání přes noc