ಅಜಯ್ ರಾವ್ ನಟನೆಯ ‘ಸರಳ ಸುಬ್ಬಾರಾವ್’ ಚಿತ್ರ ಅಕ್ಟೋಬರ್ 24 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ಅಜಯ್ ರಾವ್ ಅವರಿಗೆ ಜೋಡಿಯಾಗಿ ಮಿಶಾ ನಾರಂಗ್ ನಟಿಸಿದ್ದಾರೆ. ಪೋಷಕ ನಟರಾದ ರಂಗಾಯಣ ರಘು ಮತ್ತು ಚಿತ್ಕಲಾ ಬಿರಾದಾರ್, ವೀಣಾ ಸುಂದರ್, ರಿಷಿಕಾ ನಾಯಕ್, ಶ್ರೀ ರಾಮ್, ವಿಜಯ್ ಚೆಂಡೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶ್ರಾವಣಿ ಸುಬ್ರಹ್ಮಣ್ಯ ಖ್ಯಾತಿಯ ಮಂಜು ಸ್ವರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
1970ರ ದಶಕದ ಮೈಸೂರಿನಲ್ಲಿ ನಡೆಯುವ ಕಥೆ ಇದಾಗಿದೆ. ಪ್ರೀತಿ, ನಗು ಮತ್ತು ಸಂಬಂಧಗಳ ಹೊಸ ಕಥೆಯನ್ನು ಚಿತ್ರ ನೀಡುತ್ತದೆ. ಚಿತ್ರದುದ್ದಕ್ಕೂ ಹಾಸ್ಯ ಮತ್ತು ಭಾವನೆಗಳ ಪರಿಪೂರ್ಣ ಸಮತೋಲನ ಕಾಯ್ದುಕೊಳ್ಳಲಾಗಿದೆ. ರಿಯಾನ್ ಕ್ರಿಯೇಷನ್ಸ್ ಅಡಿಯಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿದ್ದಾರೆ.
ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಸಂಯೋಜನೆ ಇದ್ದು, ಚಿತ್ರ ನಾಲ್ಕು ಹಾಡುಗಳನ್ನು ಒಳಗೊಂಡಿದೆ. ಛಾಯಾಗ್ರಾಹಕರಾಗಿ ಪ್ರದೀಪ್, ಕಲಾ ನಿರ್ದೇಶಕರಾಗಿ ಅಮರ್ ಚೊಚ್ಚಲ ಬಾರಿಗೆ ಕೆಲಸ ಮಾಡಿದ್ದಾರೆ. ಚಿತ್ರದ ತಂತ್ರಜ್ಞರು 1970ರ ದಶಕದ ಮೈಸೂರನ್ನು ಮರುಸೃಷ್ಟಿಸಲು ಕೆಲಸ ಮಾಡಿದ್ದಾರೆ.
—–





Be the first to comment