ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸಿನಿಮಾಗಳಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ.
ಸಾರಾ ತೆಂಡೂಲ್ಕರ್ ನಟನಾ ತರಬೇತಿ ಪಡೆಯುತ್ತಿದ್ದು, ಸಿನಿಮಾಗಳಲ್ಲಿ ಅದೃಷ್ಟ ಹುಡುಕಲು ಮುಂದಾಗಿದ್ದಾರೆ. ಸಾರಾ ನಿರ್ಣಯಕ್ಕೆ ತಂದೆ ಸಚಿನ್, ತಾಯಿ ಅಂಜಲಿಯ ಒಪ್ಪಿಗೆ ಇದೆ ಎನ್ನಲಾಗಿದೆ. ಸಾರಾ ತರಬೇತಿಯನ್ನು ತಾಯಿ ಅಂಜಲಿ ಸೂಪರ್‌ವೈಸ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಸಾರಾ ತೆಂಡೂಲ್ಕರ್‌ಗೆ ಈ ಹಿಂದೆ ಬಾಲಿವುಡ್‌ನಿಂದ ಸಾಕಷ್ಟು ಅವಕಾಶಗಳು ಬಂದಿದ್ದವು. ಆದರೆ ತಾಯಿ ಅಂಜಲಿ ಆಗ ಬೇಡವೆಂದಿದ್ದರು. ಮಗಳು ದೊಡ್ಡವಳಾದ ಬಳಿಕ ಸಿನಿಮಾ ರಂಗ ಪ್ರವೇಶಿಸಲಿ ಎನ್ನುವುದು ಅಂಜಲಿ ಆಸೆಯಾಗಿತ್ತು ಎನ್ನಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿ 1.9 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಸಾರಾ ತೆಂಡೂಲ್ಕರ್ ಈಗಾಗಲೇ ಸೆಲೆಬ್ರಿಟಿ ಎನಿಸಿದ್ದಾರೆ. ಸಿನಿಮಾದಲ್ಲಿ ನಟಿಸುವ ಮೂಲಕ ಇನ್ನಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಳ್ಳಲು ಮುಂದಾಗಿದ್ದಾರೆ.
ಲಂಡನ್‌ನಲ್ಲಿ ಮೆಡಿಸಿನ್ ಪದವಿ ಪಡೆದಿರುವ ಸಾರಾ ತಮ್ಮ ಪದವಿಗೆ ಸಂಬಂಧಿಸಿದ ಉದ್ಯೋಗ ಮಾಡಲು ಆಸಕ್ತಿ ತೋರಿಲ್ಲ. ಕೆಲ ತಿಂಗಳ ಹಿಂದೆ ಬ್ರ್ಯಾಂಡ್ ಒಂದಕ್ಕೆ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು.
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ಆಟಗಾರರಾಗಿದ್ದು, ಮುಂಬೈ ಇಂಡಿಯನ್ಸ್ ತಂಡದಲ್ಲಿ ಹೆಚ್ಚುವರಿ ಆಟಗಾರರಾಗಿದ್ದಾರೆ. ಬೌಲರ್ ಆಗಿರುವ ಅರ್ಜುನ್‌ಗೆ ಯಾವುದೇ ಐಪಿಎಲ್ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿಲ್ಲ.
ಹಲವು ದಾಖಲೆಯ ಬ್ಯಾಟ್ಸ್‌ಮನ್ ಆಗಿರುವ ಸಚಿನ್ ತೆಂಡೂಲ್ಕರ್ ವಿಶ್ರಾಂತ ಜೀವನ ಕಳೆಯುತ್ತಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಕುಟುಂಬ, ಗೆಳೆಯರೊಟ್ಟಿಗೆ ಕಾಲ ಕಳೆಯುತ್ತಿರುವ ಅವರು ಐಪಿಎಲ್ ಸಮಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
____

Be the first to comment