Sapta sagaradache yello: ನಾಲ್ಕು ಭಾಷೆಗಳಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ-2’ ಬಿಡುಗಡೆ

ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ 2 ಚಿತ್ರ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

ಕನ್ನಡ ಅಲ್ಲದೇ, ತೆಲುಗು ತಮಿಳು ಹಾಗೂ ಮಳೆಯಾಳಂ ಭಾಷೆಗಳಲ್ಲಿ ನ.17ರಂದು ಸಪ್ತ ಸಾಗರದಾಚೆ ಎಲ್ಲೋ ಸೈಡ್‌-ಬಿ ಬಿಡುಗಡೆಯಾಗುತ್ತಿದೆ.

ಎರಡನೇ ಭಾಗವನ್ನು ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ರಿಲೀಸ್‌ ಆಗುತ್ತಿರುವ ಕಾರಣ ಎರಡನೇ ಭಾಗದ ಟೀಸರ್‌ನಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಂಭಾಷಣೆಗಳನ್ನು ಟೀಸರ್‌ನಲ್ಲಿ ಬಳಸಿಕೊಳ್ಳಲಾಗಿದೆ.

“ತೆಲುಗಿನಲ್ಲಿ ಸೈಡ್‌-ಬಿ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ತಮಿಳು ಮತ್ತು ಮಲಯಾಳಂನಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ ಮಾರುಕಟ್ಟೆ ಒಂದು ರೀತಿ ವಿಚಿತ್ರವಾಗಿದೆ. ಅಲ್ಲಿ ದೊಡ್ಡ ಮಟ್ಟದಲ್ಲಿ ಮಾರ್ಕೆಟಿಂಗ್‌ ಮಾಡಬೇಕು. ಹೀಗಾಗಿ ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ. ಬೇಡಿಕೆ ಬಂದರೆ ನಂತರದಲ್ಲಿ ಯೋಚನೆ ಮಾಡುತ್ತೇವೆ” ಎಂದು ನಿರ್ದೇಶಕ ಹೇಮಂತ್ ಹೇಳಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಭಾಗ(ಸೈಡ್‌-ಎ) ಸೆಪ್ಟೆಂಬರ್‌ 1ರಂದು ತೆರೆಕಂಡಿತ್ತು. ಕನ್ನಡದಲ್ಲಿ ಮೊದಲು ಬಿಡುಗಡೆಗೊಂಡ ಈ ಸಿನಿಮಾ ನಂತರ ತೆಲುಗು, ತಮಿಳು ಭಾಷೆಗೆ ಡಬ್‌ ಆಗಿ ಬಳಿಕ ಪ್ರೈಂನಲ್ಲಿ ಎಲ್ಲ ಭಾಷೆಗಳಲ್ಲೂ ರಿಲೀಸ್‌ ಆಗಿತ್ತು.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!