ಕಿಚ್ಚ ಸುದೀಪ್ ನಟನೆಯ ಚಿತ್ರ ಮಾರ್ಕ್‌ನ ‘ಮಸ್ತ್ ಮಲೈಕಾ’ ಎಂಬ ಪಾರ್ಟಿ ಟ್ರ್ಯಾಕ್‌ಗೆ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಧ್ವನಿ ನೀಡಿದ್ದಾರೆ.
ತನ್ನ ತಂದೆ ನಟಿಸಿರುವ ಚಿತ್ರದ ಮೂಲಕವೇ ಸಾನ್ವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಈ ಹಿಂದೆ ಸಾನ್ವಿ, ನಟ ನಾನಿ ಅಭಿನಯದ ‘ಹಿಟ್ 3’ ಚಿತ್ರದ ಥೀಮ್ ಸಾಂಗ್ ‘ಪೊರಟಮೆ 3.0’ ಗೆ ಧ್ವನಿ ನೀಡಿದ್ದಾರೆ.
ಸರೆಗಮಾ ಸೌತ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ‘ಮಸ್ತ್ ಮಲೈಕಾ’ ಹಾಡು, ಅದರ ಮಾಸ್ ಶೈಲಿಯ ಬೀಟ್ಸ್ , ನಕಾಶ್ ಅಜೀಜ್ ಮತ್ತು ಸಾನ್ವಿ ಅವರ ಧ್ವನಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹಾಡಿಗೆ ಶೋಭಿ ಪೌಲ್‌ರಾಜ್ ನೃತ್ಯ ಸಂಯೋಜನೆ ಇದೆ. ಸುದೀಪ್ ಮತ್ತು ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದಾರೆ.
ಸತ್ಯ ಜ್ಯೋತಿ ಫಿಲ್ಮ್ಸ್ & ಕಿಚ್ಚಾ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಿಸಲಾದ ‘ಮಾರ್ಕ್’ ನ್ನು ವಿಜಯ್ ಕಾರ್ತಿಕೇಯ ಬರೆದು ನಿರ್ದೇಶಿಸಿದ್ದಾರೆ. ಚಿತ್ರವು ಡಿಸೆಂಬರ್ 25 ರಂದು ಬಿಡುಗಡೆಯಾಗಲಿದೆ. ಶೈನ್ ಟಾಮ್ ಚಾಕೊ, ನವೀನ್ ಚಂದ್ರ, ವಿಕ್ರಾಂತ್, ಯೋಗಿ ಬಾಬು, ಗುರು ಸೋಮಸುಂದರಂ, ನಿಶ್ವಿಕಾ ನಾಯ್ಡು, ರೋಶನಿ ಪ್ರಕಾಶ್, ಅರ್ಚನಾ ಕೊಟ್ಟಿಗೆ, ದೀಪಶಿಖಾ, ಗೋಪಾಲ್ ಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್ ನಟಿಸಿದ್ದಾರೆ.
‘ಮಾರ್ಕ್’ ಹಾಡಿಗೆ ಶೇಖರ್ ಚಂದ್ರ ಅವರ ಛಾಯಾಗ್ರಹಣ, ಎಸ್.ಆರ್. ಗಣೇಶ್ ಬಾಬು ಸಂಕಲನವಿದೆ. ಸ್ಟಂಟ್ ಸಿಲ್ವಾ, ಸುಪ್ರೀಂ ಸುಂದರ್, ರವಿ ವರ್ಮಾ, ಕೆವಿನ್ ಕುಮಾರ್, ವಿಕ್ರಮ್ ಮೋರ್, ಸುಬ್ರಮಣಿ ಆ್ಯಕ್ಷನ್ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ.
—–





Be the first to comment