ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಮಹಿಳಾ ಪ್ರಧಾನ ಸಿನಿಮಾದಲ್ಲಿ ಸಾನ್ವಿ ಶ್ರೀವಾಸ್ತವ್ ನಟಿಸಲಿದ್ದಾರೆ.
ಈಗಾಗಲೇ ಕಥೆ ಸಿದ್ಧವಾಗಿದ್ದು, ಮಹಿಳಾ ಪ್ರಧಾನ ಸಿನಿಮಾದಲ್ಲಿ ಅವನೇ ಶ್ರೀಮನ್ನಾರಾಯಣದ ನಟಿ ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಉಳಿದ ಕಲಾವಿದರನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆದಿದೆ.
ಶೇಕಡ ಅರವತ್ತಕ್ಕೂ ಹೆಚ್ಚು ಶೂಟಿಂಗ್ ಅಮೆರಿಕಾದಲ್ಲಿ ನಡೆಯಲಿದೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅಮೇರಿಕಾ ಅಮೇರಿಕಾ ಸಂಗೀತ ಸಂಯೋಜಕ ಮನೋ ಮೂರ್ತಿ ಸಂಗೀತ ನೀಡಲಿದ್ದಾರೆ. ಮಾನ್ಸೂನ್ ರಾಗ ಸಿನಿಮಾಕ್ಕಾಗಿ ಸಾಕಷ್ಟು ಪ್ರಶಂಸೆ ಗಳಿಸಿದ ಛಾಯಾಗ್ರಾಹಕ ಎಸ್ಕೆ ರಾವ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ರಮೇಶ್ ಅರವಿಂದ್, ಹೇಮಾ ಪಂಚಮುಖಿ ಮತ್ತು ಅಕ್ಷಯ್ ಆನಂದ್ ಅಭಿನಯದ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೇರಿಕಾ ಅಮೇರಿಕಾ (1997) ಚಿತ್ರದ ಬೆಳ್ಳಿ ಹಬ್ಬವನ್ನು ಕಳೆದ ವರ್ಷ ಆಚರಿಸಲಾಗಿತ್ತು.
___

Be the first to comment