ಮನೋಜ್ ಮೂವಿ ಮೇಕರ್ಸ್ ಲಾಂಛನದಲ್ಲಿ ಶಿವಕುಮಾರ್, ದೇವರಾಜ್, ಶಬರೀಶ್ ನಿರ್ಮಿಸುತ್ತಿರುವ ಸಂತು ಲವ್ಸ್ ಸಂಧ್ಯಾ ಚಿತ್ರಕ್ಕೆ ಕಳೆದ ವಾರ ಮುಳಬಾಗಿಲು ಚಿಂತಾಮಣಿಯ ಕೈಲಾಸಗಿರಿ ಸುತ್ತಮುತ್ತ ನಾಯಕ ನಾಯಕಿ ಅಭಿನಯಿಸಿದ “ಊರಂದ್ರೆ ನಮ್ಮ ಊರು, ನಮ್ಮ ತವರು ಸ್ವರ್ಗದ ಹಾಗೆ ಇಲ್ಲಿದೆ’’ ಹಾಗೂ “ನನಮ್ಯಾಲೆ ಮನಸಿಟ್ಟು ಬಂದೀದಿ ನನ ಹಿಂದೆ. ಸರಿಯೇನಾ ನಿನ ತೀರಿ’’ ಎಂಬ ಎರಡು ಹಾಡುಗಳಲ್ಲದೆ, ಮಾತಿನ ಭಾಗದ ಚಿತ್ರೀಕರಣ ಸಾಹಸ ದೃಶ್ಯಗಳ ಚಿತ್ರೀಕರಣ ಸೇರಿದಂತೆ ಸತತವಾಗಿ ಈ ಚಿತ್ರಕ್ಕೆ ಶೂಟಿಂಗ್ ಕಾರ್ಯ ನಡೆಯುತ್ತಿದೆ. ನಾಲ್ಕು ವರ್ಷಗಳ ಹಿಂದೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ನಡೆದ ನೈಜ ಘಟನೆಯೊಂದು ಚಲನಚಿತ್ರವಾಗಿ ಮೂಡಿಬರುತ್ತಿದೆ.
ಈ ಚಿತ್ರಕ್ಕೆ ಆರ್.ಕೆ. ಗಾಂಧಿ ಈ ಚಿತ್ರಕ್ಕೆ ಕತೆ, ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಪೌಲ್ ರಾಜು ಛಾಯಾಗ್ರಹಣ, ಗಂಟಾಡಿ ಕೃಷ್ಣ ಸಂಗೀತ, ಸುರೇಶ್ ಕಂಬಳಿ ಸಾಹಿತ್ಯ, ಶಂಕರ್ ಸಾಹಸ, ಸಾನ್ವಿ ನೃತ್ಯ ನಿರ್ದೇಶನ, ವಿನಯ್ ಜಿ. ಆಲೂರು ಸಂಕಲನವಿದೆ. ಜೈ ಸುಬ್ರಮಣಿ, ಬಲರಾಮ್, ಸುಶ್ಮಾ ಗೌಡ, ಕಿಲ್ಲರ್ ವೆಂಕಟೇಶ್, ಬ್ಯಾಂಕ್ ಜನಾರ್ಧನ್, ಹೊನ್ನವಳ್ಳಿ ಕೃಷ್ಣ, ಜ್ಯೋತಿ ಮೂರೂರು, ಕಾವ್ಯ ಪ್ರಕಾಶ್, ದಿಂಬಾಲ ಅಶೋಕ್, ಕೋಲಾರ ಬಾಬು, ಮಹೇಶ್ ಬ್ರೂಸ್ಲಿ, ತಿರುಪತಿ ರಾಜು, ನಾಗರಾಜ್ ಮುಂತಾದವರ ತಾರಾಬಳಗವಿದೆ.

Pingback: directory