ಚಿತ್ರ: ಸಂಜು ವೆಡ್ಸ್ ಗೀತಾ 2
ನಿರ್ದೇಶನ: ನಾಗಶೇಖರ್
ತಾರಾ ಬಳಗ: ಶ್ರೀನಗರ ಕಿಟ್ಟಿ, ರಚಿತಾ ರಾಮ್, ಸಂಪತ್ ರಾಜ್, ತಬಲಾ ನಾಣಿ, ಇತರರು
ರೇಟಿಂಗ್: 3.5
ಹೊಸ ವರ್ಷನ್ ನೊಂದಿಗೆ ಮತ್ತೆ ತೆರೆಯ ಮೇಲೆ ಬಂದಿರುವ ಬಡ ಪ್ರೇಮಿ ಶ್ರೀಮಂತನಾಗಿ ಅಮರನಾಗುವ ಕಥೆಯ ಚಿತ್ರ ಸಂಜು ವೆಡ್ಸ್ ಗೀತಾ 2.
ಕಳೆದ ಬಾರಿ ಅಪೂರ್ಣ ಕತೆಯೊಂದಿಗೆ ಗಡಿಬಿಡಿಯಲ್ಲಿ ತೆರೆಗೆ ಬಂದಿದ್ದ ಸಂಜು ವೆಡ್ಸ್ ಗೀತಾ 2 ಚಿತ್ರ ಈ ಬಾರಿ ಪ್ರೇಮದ ದೃಶ್ಯ ಕಾವ್ಯವನ್ನು ಕಟ್ಟಿಕೊಡುವ ಪ್ರಯತ್ನದೊಂದಿಗೆ ತೆರೆಯ ಮೇಲೆ ಬಂದಿದೆ. ನಿರ್ದೇಶಕರು ವಿಷಾದದ ಪ್ರೇಮ ಕಥೆಯನ್ನು ಪ್ರೇಕ್ಷಕರಿಗೆ ಇನ್ನಷ್ಟು ಗಾಢವಾಗಿ ತಾಗುವಂತೆ ಮಾಡುವ ಯತ್ನ ಮಾಡಿದ್ದಾರೆ.
ಈ ಬಾರಿ ನೆಗೆಟಿವ್ ಪಾತ್ರದಲ್ಲಿ ಬರುವ ನಾಯಕಿಯ ತಂದೆಯ ಪಾತ್ರ ಸ್ಪಷ್ಟವಾಗಿ ಮೂಡಿ ಬಂದಿದೆ. ಮುಖ್ಯ ಕಥೆಯ ಎಳೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಶಿಡ್ಲಘಟ್ಟ ರೇಷ್ಮೆ ಉತ್ಪಾದನೆಯ ಕಥೆ ಇಲ್ಲಿದೆ. ಚಿತ್ರದಲ್ಲಿ ಹೆಚ್ಚಿನ ಫೀಲ್ ಆವರಿಸಿಕೊಂಡಿದೆ.
ಚಿತ್ರದ ಹಾಡು, ಮಳೆ ಖುಷಿ ನೀಡುತ್ತದೆ. ರಚಿತಾ ರಾಮ್, ತಬಲಾ ನಾಣಿ ಅವರ ನಟನೆ ಮನಸ್ಸಿನಲ್ಲಿ ಉಳಿಯುತ್ತದೆ. ಸ್ವಿಜರ್ಲ್ಯಾಂಡಿನ ಅದ್ಬುತ ಪ್ರಕೃತಿ ಪ್ರೇಮದ ದುರಂತ ಕಥೆಯ ಮಧ್ಯೆಯೂ ಮನಸಿನಲ್ಲಿ ಉಳಿಯುತ್ತದೆ.

Be the first to comment