ಸಂಭಾವನೆ ಹೆಚ್ಚಿಸಿದ ಸಂಜಯ್ ದತ್

ವಿಲನ್​ ಪಾತ್ರ ಮಾಡಲು ಸಂಜಯ್​ ದತ್​ ಅವರು ಭರ್ತಿ 10 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಅಧೀರ ಪಾತ್ರ ಹಿಟ್ ಆದ ಬಳಿಕ ಸಂಜಯ್ ದತ್ ಅವರಿಗೆ ಡಿಮಾಂಡ್ ಹೆಚ್ಚಿದೆ.

‘ವಿಕ್ರಮ್​’ ಸಿನಿಮಾ ಮೂಲಕ ಗೆಲುವು ಕಂಡಿರುವ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರು ‘ದಳಪತಿ’ ವಿಜಯ್​ ಜೊತೆ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾದಲ್ಲಿ ವಿಲನ್​ ಪಾತ್ರ ಮಾಡುವಂತೆ ಸಂಜಯ್​ ದತ್​ ಅವರಿಗೆ ಆಫರ್​ ನೀಡಲಾಗಿದ್ದು, ಅದಕ್ಕಾಗಿ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಸಂಜಯ್​ ದತ್​ ಅವರ ಲುಕ್​ ಗಮನ ಸೆಳೆದಿತ್ತು. ಅಧೀರನ ಗೆಟಪ್​ ಜನರಿಗೆ ಇಷ್ಟ ಆಗಿತ್ತು. ದಕ್ಷಿಣ ಭಾರತದ ಸೂಪರ್​ ಸ್ಟಾರ್​ಗಳ ಚಿತ್ರದಲ್ಲಿ ಸಂಜಯ್​ ದತ್​ ಅವರು ಬ್ಯಾಡ್​ ಬಾಯ್​ ಪಾತ್ರ ಮಾಡಿದರೆ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ ಎಂಬುದು ಎಲ್ಲ ನಿರ್ಮಾಪಕರಿಗೆ ಗೊತ್ತಾಗಿದೆ. ಹಾಗಾಗಿ ಅವರ ಕಾಲ್​ ಶೀಟ್​ ಪಡೆಯಲು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ.

ಬಾಲಿವುಡ್​ನಲ್ಲಿ ಮಿಂಚುತ್ತಿದ್ದ ಸಂಜಯ್ ದತ್ ಅವರಿಗೆ ಈಗ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್​ ಸೃಷ್ಟಿ ಆಗಿದೆ. ಅದಕ್ಕೆ ‘ಕೆಜಿಎಫ್​: ಚಾಪ್ಟರ್​ 2’ ಕಾರಣ ಆಗಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!