ಕೆಜಿಎಫ್ 2 ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಸಂಜಯ್ ದತ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದರು.
ಅಪ್ಪು ಫೋಟೊಗೆ ನಮಿಸಿದ ಅವರು ಅಪ್ಪು ಕುಟುಂಬವನ್ನು ಭೇಟಿ ಮಾಡಿ ಯೋಗಕ್ಷೇಮ ಕ್ಷೇಮ ವಿಚಾರಿಸಿ ಸಾಂತ್ವನ ಹೇಳಿದರು.
ಸಂಜಯ್ ದತ್ ಅವರನ್ನು ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಕುಟುಂಬ ಸದಸ್ಯರು ಸ್ವಾಗತಿಸಿದರು. ಅಪ್ಪು ಕುಟುಂಬ ಸದಸ್ಯರು ಕೆಲ ಹೊತ್ತು ಸಂಜಯ್ ದತ್ ಅವರೊಂದಿಗೆ ಮಾತುಕತೆ ನಡೆಸಿದರು. ಅಪ್ಪು ದಿಢೀರ್ ನಿಧನದ ಬಗ್ಗೆ ಸಂಜಯ್ ದತ್ ಬೇಸರ ವ್ಯಕ್ತಪಡಿಸಿದ್ದು, ಅಪ್ಪು ಪತ್ನಿ ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಸಂಜಯ್ ದತ್ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ನಲ್ಲಿ ಸಂಜಯ್ ದತ್ ಅವರು ಅಧೀರನಾಗಿ ಕಾಣಿಸಿಕೊಳ್ಳಲಿದ್ದು ತೆರೆಮೇಲೆ ರಾಕಿಂಗ್ ಸ್ಟಾರ್ ಯಶ್ ಜೊತೆ ಮುಖಾಮುಖಿಯಾಗಲಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಸಂಜಯ್ ದತ್ ಅವರು ಕೆಜಿಎಫ್ 2 ಚಿತ್ರದ ಡಬ್ಬಿಂಗ್ ಮಾಡುವುದು ಕಷ್ಟ ಎನ್ನುವ ಸ್ಥಿತಿ ಎದುರಾಗಿತ್ತು. ಚಿಕಿತ್ಸೆಬಳಿಕ ಸುಧಾರಿಸಿಕೊಂಡಿದ್ದ ಅವರು ಬಳಿಕ ಡಬ್ಬಿಂಗ್ ಮಾಡಿದ್ದರು. ಕೆಜಿಎಫ್ 2 ಟ್ರೈಲರ್ ಬಿಡುಗಡೆ ಆಗಿದ್ದು, ಸಂಜಯ್ ದತ್ ಅವರು ಅಧೀರ ಆಗಿ ಕಾಣಿಸಿಕೊಂಡಿದ್ದಾರೆ. ಖಳ ನಾಯಕನ ಪಾತ್ರದಲ್ಲಿ ಮಿಂಚಿರುವ ಸಂಜಯ್ ದತ್ ಅವರ ಪಾತ್ರಕ್ಕೆ ಸಿನಿಪ್ರಿಯರು ಫಿದಾ ಆಗಿದ್ದಾರೆ.
__

Be the first to comment