ರಮೇಶ್ ಅರವಿಂದ್ ಅವರ ಮುಂಬರುವ ಚಿತ್ರ, ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ 2 ಸಿನಿಮಾದ ವಿಶೇಷ ಹಾಡೊಂದರಲ್ಲಿ ಚಾರ್ಲಿ 777 ಖ್ಯಾತಿಯ ಸಂಗೀತಾ ಶೃಂಗೇರಿ ಕಾಣಿಸಿಕೊಳ್ಳಲಿದ್ದಾರೆ.
ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿರುವ ಹಾಡಿಗೆ ಧನಂಜಯ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.
ಸಂಗೀತಾ ಶೃಂಗೇರಿಗೆ ಇದು ಮೊದಲ ವಿಶೇಷ ಹಾಡು ಆಗಿದೆ. ಅವರು ರಮೇಶ್ ಅರವಿಂದ್ ಅವರೊಂದಿಗೆ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
ಮಾಯಾವಿಯ ನಿಗೂಢ ಪ್ರಕರಣ ಎಂದು ಕರೆಯಲ್ಪಡುವ ತನಿಖಾ ಥ್ರಿಲ್ಲರ್ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ. ಸಿನಿಮಾ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.
ಚಿತ್ರದಲ್ಲಿ ರಾಧಿಕಾ ನಾರಾಯಣ್, ನಾಸರ್, ಮೇಘನಾ ಗಾಂವ್ಕರ್ ಮತ್ತು ಬಾಲ ಕಲಾವಿದೆ ಆರಾಧ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ರಾಕೇಶ್ ಮೈಯ್ಯ, ವಿನಾಯಕ್ ಜೋಶಿ, ರಘು ರಾಮನಕೊಪ್ಪ, ಶೋಭರಾಜ್, ಶ್ರೀನಿವಾಸ ಪ್ರಭು, ಸುಮಂತ್ ಭಟ್, ಸೃಷ್ಟಿ ಶೆಟ್ಟಿ ಮತ್ತು ಮಧುರಾ ಗೌಡ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ.
___

Be the first to comment