Sangeetha Bhat: ಸ್ಯಾಂಡಲ್‌ವುಡ್‌ಗೆ ಮರಳಿದ ಸಂಗೀತಾ ಭಟ್

ಸ್ಯಾಂಡಲ್‌ವುಡ್‌ನಲ್ಲಿ ಈ ಹಿಂದೆ ಮೀ ಟೂ ಅಭಿಯಾನದಲ್ಲಿ ತಮಗಾದ ಕೆಟ್ಟ ಅನುಭವ ಹಂಚಿಕೊಂಡಿದ್ದ ಸಂಗೀತಾ ಭಟ್ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ.

ಸಂಗೀತಾ ಭಟ್ ಕಮ್ ಬ್ಯಾಕ್ ಸಿನಿಮಾ ಟೈಟಲ್ ರಿವೀಲ್ ಆಗಿದ್ದು, ಈ ಚಿತ್ರಕ್ಕೆ ಕ್ಲಾಂತ ಅನ್ನುವ ವಿಶೇಷ ಹೆಸರನ್ನು ಇಡಲಾಗಿದೆ.

ಚಿತ್ರದಲ್ಲಿ ಯುವತಿಯ ಪಾತ್ರದಲ್ಲಿ ಸಂಗೀತಾ ಭಟ್ ಅಭಿನಯಿಸಿದ್ದಾರೆ. ಇದಕ್ಕೂ ಹೆಚ್ಚಾಗಿ ಈ ಚಿತ್ರದಲ್ಲಿ ಸಂಗೀತಾ ಆಕ್ಷನ್ ಕೂಡ ಮಾಡಿದ್ದಾರೆ.

ಸಂಗೀತಾ ಭಟ್ ಅಭಿನಯದ ಈ ಚಿತ್ರವನ್ನು ವೈಭವ್ ಪ್ರಶಾಂತ್ ಡೈರೆಕ್ಟ್ ಮಾಡುತ್ತಿದ್ದಾರೆ. ವೈಭವ್ ಪ್ರಶಾಂತ್ ಈಗಾಗಲೇ ಮೂರು ಸಿನಿಮಾಗಳನ್ನ ಮಾಡಿದ್ದಾರೆ. ಇವುಗಳಲ್ಲಿ ರಂಗನ್ ಸ್ಟೈಲ್, ದಗಲ ಬಾಜಿ ಸೇರಿವೆ.

ಮಕ್ಕಳು ಅಪ್ಪ-ಅಮ್ಮನಿಗೆ ಸುಳ್ಳು ಹೇಳಿ ತಪ್ಪು ದಾರಿ ಹಿಡಿಯುತ್ತಾರೆ. ಆದರೆ ಅದನ್ನುಮಾಡಬೇಡಿ ಅನ್ನೋದು ಕ್ಲಾಂತ ಸಿನಿಮಾದ ವಿಷಯ ಆಗಿದೆ. ಟೀನೇಜ್ ದಾಟಿ ಕೆಲಸ ಮಾಡ್ತಿರೋ ಹುಡುಗಿಯಾಗಿಯೇ ಸಂಗೀತಾ ಭಟ್ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾ ತಂಡ ಟೈಟಲ್ ಕೂಡ ರಿಲೀಸ್ ಮಾಡಿದೆ. ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ವಿಘ್ನೇಶ್ ಈ ಚಿತ್ರದ ಮೂಲಕ ಕನ್ನಡಕ್ಕೂ ಬಂದಿದ್ದಾರೆ.

ಚಿತ್ರದಲ್ಲಿ ಶೋಭರಾಜ್, ವೀಣಾ ಸಂಗೀತ, ಕಾಮಿಡಿ ಕಿಲಾಡಿ ದೀಪಿಕಾ, ಪ್ರವೀಣ್ ಜೈನ್ ನಟಿಸಿದ್ದಾರೆ. ಎಸ್.ಪಿ. ಚಂದ್ರಕಾಂತ್ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಮೋಹನ್ ಲೋಕನಾಥ್ ಛಾಯಾಗ್ರಹಣ ಮಾಡಿದ್ದಾರೆ.


—-

Be the first to comment

Leave a Reply

Your email address will not be published. Required fields are marked *

Translate »
error: Content is protected !!