ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆಗೆ ಕನ್ನಡದ ಕೆಲವು ಸ್ಟಾರ್‌ಗಳಿಗೆ ಮಾತ್ರ ಆಹ್ವಾನ ಪತ್ರಿಕೆ ನೀಡಲಾಗಿದೆ.
ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಆರತಕ್ಷತೆಗೆ ಕನ್ನಡದ ಕೆಲವು ಸ್ಟಾರ್‌ಗಳಿಗೆ ಮಾತ್ರ ಸ್ವತಃ ರಶ್ಮಿಕಾ ಮೆಸೇಜ್ ಮಾಡಿ ಆಮಂತ್ರಣ ನೀಡಿರುವುದು ವಿಶೇಷವಾಗಿದೆ. ಸ್ಯಾಂಡಲ್ವುಡ್ ಬಹು ಬೇಡಿಕೆ ನಟರಿಗೆ ಮಾತ್ರ ಮದುವೆ ಆಹ್ವಾನ ಪತ್ರಿಕೆ ನೀಡಿರುವುದು ಚರ್ಚೆಗೂ ಕಾರಣವಾಗಿದೆ.
ಆರತಕ್ಷತೆಗೆ ಶಿವರಾಜ್ ಕುಮಾರ್ , ಕಿಚ್ಚ ಸುದೀಪ್ , ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್ , ರವಿಚಂದ್ರನ್ , ಧ್ರುವ ಸರ್ಜಾ, ಗಣೇಶ್ , ನಿರ್ದೇಶಕ ಎ.ಹರ್ಷ, ನಂದ ಕಿಶೋರ್ , ಸಿಂಪಲ್ ಸುನಿ, ಅಶಿಕಾ ರಂಗನಾಥ್ ಗೆ ಮಾತ್ರ ಆಹ್ವಾನ ಪತ್ರಿಕೆ ನೀಡಲಾಗಿದೆ.
ರಶ್ಮಿಕಾ ನಟಿಸಿದ ಮೊದಲ ಚಿತ್ರವಾದ ಕನ್ನಡದ ‘ಕಿರಿಕ್ ಪಾರ್ಟಿ’ಯ ನಿರ್ದೇಶಕ ರಿಷಬ್ ಶೆಟ್ಟಿ, ಮಾಜಿ ಗೆಳೆಯ ರಕ್ಷಿತ್ ಶೆಟ್ಟಿ ಅವರಿಗೆ ಆಹ್ವಾನ ನೀಡಲಾಗಿಲ್ಲ. ಅದೇ ಬಳಗದ ನಟ ಪ್ರಮೋದ್ ಶೆಟ್ಟಿ ಅವರಿಗೂ ಆಹ್ವಾನ ನೀಡಲಾಗಿಲ್ಲ. ಈಗ ರಶ್ಮಿಕಾ ಸ್ಟಾರ್ ಆಗಿದ್ದರೂ, ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡಲು ಕಾರಣರಾದ ಚಿತ್ರರಂಗದ ಬಳಗವನ್ನು ಆಹ್ವಾನಿಸದೆ ಇರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ವಿವಾಹ ಉದಯಪುರದಲ್ಲಿ ನಿನ್ನೆ ವಿಜೃಂಭಣೆಯಿಂದ ನೆರವೇರಿದೆ.
—-





Be the first to comment