ಬೆಂಗಳೂರು : ಹೃದಯಾಘಾತದಿಂದ ಸ್ಯಾಂಡಲ್ ವುಡ್ ಹಿರಿಯ ನಟ ರಾಕ್‌ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ. ಇಂದು ಶೂಟಿಂಗ್ ನಲ್ಲಿ ತೊಡಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
2012 ರಲ್ಲಿ ಡಕೋಟಾ ಅನ್ನೊ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ತದ ನಂತರ ದಿಗಂತ್ ಅಭಿನಯದ ಪಂಚರಂಗಿ ಸಿನಿಮಾದ ಮೈಲಕ ಖ್ಯಾತಿ ಪಡೆದಿದ್ದರು. ಕಾಮಿಡಿ ಹಾಗೂ ಪೋಷಕ ಪಾತ್ರದಲ್ಲಿ ಮಿಂಚಿದ್ದರು. ಪರಮಾತ್ಮ, ಡ್ರಾಮಾ ಇತ್ತೀಚಿನ ಕೆಮಿಸ್ಟ್ರಿ ವಿತ್ ಕರಿಯಪ್ಪ ಸೇರಿದಂತೆ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ರು.
ಪೃಥ್ವಿ ಅಂಬಾರ್ ನಾಯಕತ್ವದ ‘ಶುಗರ್ ಲೇಸ್’ ಚಿತ್ರದಲ್ಲಿ ಪಾತ್ರ ಮಾಡುತ್ತಿದ ಸುಧಾಕರ್ ಇಂದು ಬೆಳಿಗ್ಗೆ ಶೂಟಿಂಗ್ ಗೆ ಬಂದು ಮೇಕಪ್ ಹಾಕುವ ನಡುವೆ ಕುಸಿದು ಬಿದ್ದಿದ್ದರು. ಬನ್ನೇರುಘಟ್ಟದಲ್ಲಿ ಚಿತ್ರೀಕರಣ ನಡೆಯುತ್ತಿದ್ದು ಅವರನ್ನೂ ಪೋಟೀಸ್ ಆಸ್ಪತ್ರಗೆ ಕರೆದೊಯ್ಯಲಾಗಿದೆ.ಅವರಿಗೆ ಅದಾಗಲೇ ಹೃಧಯಘಾತದಲ್ಲಿ ನಿಧನರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ರಾಕ್ ಲೈನ್ ಸುಧಾಕರ್ ನಿಧನಕ್ಕೆ ಚಿತ್ರರಂಗದ ಕಲಾವಿದರು ಕಂಬನಿ ಮಿಡಿದಿದ್ದಾರೆ. ಸಿಂಪಲ್ ಸುನಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ ಎಂದು
ಡಾಲಿ ಧನಂಜಯ್ ಟ್ವೀಟ್
Pingback: คาสิโน