ರಮ್ಯಾ ಬ್ಯಾನರ್ ನಲ್ಲಿ ರಾಜ್ ಶೆಟ್ಟಿ ಮೊದಲ ಚಿತ್ರ?

ಸ್ಯಾಂಡಲ್ ವುಡ್ ನಟಿ ರಮ್ಯಾ ಅವರ ಹೊಸ ಬ್ಯಾನರ್ ಆಯಪಲ್ ಬಾಕ್ಸ್ ಪ್ರೊಡಕ್ಷನ್ ಹೌಸ್ ನಲ್ಲಿ ರಾಜ್ ಬಿ ಶೆಟ್ಟಿ ಮೊದಲ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ರಮ್ಯಾ ಅವರಿಗೆ ಸಿನಿಮಾ ಮಾಡುತ್ತಿಲ್ಲ ಎಂದು ರಾಜ್ ಬಿ ಶೆಟ್ಟಿ ಹೇಳುತ್ತಿದ್ದಾರೆ. ಆದರೆ ಆಯಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯಿಂದ ರಾಜ್ ಬಿ ಶೆಟ್ಟಿ ಮೊದಲ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಈಗಾಗಲೇ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಎರಡು ಹಂತದಲ್ಲಿ ಮಾತುಕತೆ ಕೂಡ ಮಾಡಿದ್ದಾರೆ. ಸ್ವತಃ ರಮ್ಯಾ ಮನೆಗೆ ಹೋಗಿ ಶೆಟ್ಟಿ ಅವರು ಕಥೆ ಕೂಡ ಹೇಳಿ ಬಂದಿದ್ದಾರೆ. ಮುಂದಿನ ಹಂತದ ಕೆಲಸಗಳಲ್ಲೂ ಅವರು ತೊಡಗಿದ್ದಾರೆ ಎಂದು ಹೇಳಲಾಗಿದೆ.

ರಾಜ್ ಶೆಟ್ಟಿ ಅವರು ರಮ್ಯಾ ಅವರೇ ಈ ವಿಷಯವನ್ನು ಬಹಿರಂಗ ಪಡಿಸಲಿ ಎಂದು ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶೀಘ್ರವೇ ಈ ಬಗ್ಗೆ ಅಧಿಕೃತ ಮಾಹಿತಿ ಲಭಿಸುವ ನಿರೀಕ್ಷೆ ಹೊಂದಲಾಗಿದೆ.


 

Be the first to comment

Leave a Reply

Your email address will not be published. Required fields are marked *

Translate »
error: Content is protected !!