‘ಅಂಬಾನಿ ಪುತ್ರ’ ಎಂದರೆ ಧೀರುಬಾಯ್‍ಅಂಬಾನಿ ನೆನಪಿಗೆ ಬರುತ್ತಾರೆ.ಆದರೆಇದೇ ಹೆಸರಿನಚಿತ್ರವುಅವರಕತೆಯಾಗಿರುವುದಿಲ್ಲ. ಹಳ್ಳಿ ಕಡೆಗಳಲ್ಲಿ ದುಡ್ಡುಇದ್ದು, ತಲೆತಿರುಗುತ್ತಿದ್ದರೆಆಡು ಭಾಷೆಯಲ್ಲಿಅಲ್ಲಿನಜನರು ಈ ಹೆಸರಿನಿಂದಲೇಕರೆಯುತ್ತಾರಂತೆ. ಅದರಂತೆಊರಿನ ಹುಡುಗನೊಬ್ಬ ಶೀರ್ಷಿಕೆಯಂತೆ ಬಿಂದಾಸ್ ಆಗಿ ಚಂಚಲ ಮನಸ್ಸುಳ್ಳವನಾಗಿರುತ್ತಾರೆ. ಅವಳು ಸಿಕ್ಕರೆ, ಇವಳು ಅಂದುಕೊಂಡು ಬದುಕನ್ನು ಸಾಗಿಸುತ್ತಿರುತ್ತಾನೆ.ಪ್ರಪಂಚ ನಡಿತಾಇರೋದು ನಂಬಿಕೆ ಮೇಲೆ. ಇವುಗಳನ್ನು ಆಧರಿಸಿದ ಮತ್ತುಕೆಲವೊಂದು ನೈಜ ಘಟನೆಗಳನ್ನು ಕಂಡಿದ್ದು-ಕೇಳಿದ್ದು-ನೋಡಿದ್ದುಎಂಬಂತೆಇಂತಹ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ. ಅಡಿಬರಹದಲ್ಲಿಓದಿರೋದು ಕಾ…ಸೂತ್ರ…. ವೆಂದು ಹೇಳಿಕೊಂಡಿದೆ.ಇದನ್ನುಕಾದಂಬರಿ, ಕಾಮಿಡಿಎಂಬುದನ್ನುತೀರ್ಮಾನ ಮಾಡಲುಜನರಿಗೆ ಬಿಡಲಾಗಿದೆ.ಚಿತ್ರರಂಗದಲ್ಲಿಅನುಭವ ಪಡೆದುಕೊಂಡಿರುವದೊರೆರಾಜ್‍ತೇಜಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಸಲ ನಿರ್ದೇಶನ ಮಾಡಿದ್ದಾರೆ.
ಬಿಇ ಪರೀಕ್ಷೆ ಬರೆದಿರುವ ಸುಪ್ರೀಂ ನಾಯಕನಾಗಿ ಹೊಸ ಅನುಭವ. ಇಬ್ಬರು ನಾಯಕಿಯರುಇರಲಿದ್ದು, ಮೂಲತ: ಡ್ಯಾನ್ಸರ್‍ಆಗಿರುವಆಶಾಭಂಡಾರಿ ಮುಗ್ದಹುಡುಗಿ. ಬೋಲ್ಡ್ ಆಗಿ ಮಾತಾಡುವಕಾವ್ಯ.ಉಳಿದಂತೆ ಪ್ರೀತಂಜೊತೆಗೆ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ.ಹಾಸನ, ಮಂಡ್ಯಾ, ಹೊನ್ನಾವರ, ಮಹಾರಾಷ್ಟ್ರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಧುದೇವಲಾಪುರು, ರೋಹಿತ್‍ಆದಿತ್ಯ ಹಾಗೂ ನಿರ್ದೇಶಕರು ಬರೆದಿರುವಐದು ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕಅಭಿಮನ್‍ರಾಯ್ ಸಹೋದರಅಭಿಷೇಕ್‍ರಾಯ್ ಪ್ರಥಮ ಬಾರಿರಾಗ ಒದಗಿಸಿದ್ದಾರೆ.ಛಾಯಾಗ್ರಹಣ ವಿ.ರಾಮಾಂಜನೇಯ, ನೃತ್ಯ ಹೈಟ್ ಮಂಜು ನಿರ್ವಹಿಸಿದ್ದಾರೆ. ಕತೆಇಷ್ಟಪಟ್ಟು ಮಕ್ಕಳಾದ ಸುಪ್ರೀಂ,ಪ್ರೀತಂ ಸಲುವಾಗಿ ನಿರ್ಮಾಣ ಮಾಡಿರುವ ಹಾಸನದವೆಂಕಟೇಶ್.ಕೆ.ಎನ್. ಪತ್ನಿ ಸುಮಿತ್ರಾ ಸಹ ನಿರ್ಮಾಪಕರು ಹಾಗೂ ವರುಣ್‍ಗೌಡ ಪಾಲುದಾರರು.
ಸಿಡಿ ಬಿಡುಗಡೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷಎಸ್.ಎ.ಚಿನ್ನೆಗೌಡ ಮಾತನಾಡಿ ನಿರ್ಮಾಪಕರು ಐವತ್ತೇಳು ಕತೆಗಳನ್ನು ತಿರಸ್ಕರಿಸಿ, ಇದನ್ನೆಆಯ್ಕ ಮಾಡಿಕೊಂಡಿರುವುದನ್ನು ನೋಡಿದರೆಅವರಲ್ಲಿರುವ ಶ್ರದ್ದೆಕಾಣಿಸುತ್ತದೆ.ಹೋಂ ವರ್ಕ್ ಮಾಡಿಕೊಂಡು ಶುರು ಮಾಡಿದರೆಚಿತ್ರವುಚೆನ್ನಾಗಿ ಬರುತ್ತದೆಂದು ಈಗಿನ ನಿರ್ದೇಶಕರುಗಳಿಗೆ ಕಿವಿಮಾತು ಹೇಳಿದರು.
ನಿಮ್ಮಚಿತ್ರಕ್ಕೆ ಒಳ್ಳೆಯ ಪಾಯಿಂಟ್ಸ್‍ಕೊಡುತ್ತೆವೆಂದು ಹಣಕ್ಕೆ ಬೇಡಿಕೆಇಡುತ್ತಿರುವ ಬಗ್ಗೆ ಸುದ್ದಿ ಬಂದಿದೆ. ಬುಕ್ ಮೈ ಷೋದವರು ನಮ್ಮಲ್ಲಿಅದು ನಡೆಯುವುದಿಲ್ಲವೆಂದು ಹೇಳಿದ್ದಾರೆ. ಇಂತಹ ಸುಳ್ಳು ಕರೆಗಳಿಗೆ ನಿರ್ಮಾಪಕರುಗಮನ ಕೊಡಬಾರದು.ಜನರ ಆರ್ಶಿವಾದ ಇದ್ದರೆಚಿತ್ರವುಖಂಡಿತಗೆಲ್ಲುತ್ತದೆಂದು ಮಂಡಳಿ ಕಾರ್ಯದರ್ಶಿ ಬಾ.ಮ.ಹರೀಶ್‍ಅಭಿಪ್ರಾಯಪಟ್ಟರು.
ಟೈಟಲ್ ಕೇಳಿದಾಗ ನಿಜಕ್ಕೂ ಶಾಕ್,ಸಂತೋಷವಾಯಿತುರಿಯಲ್‍ಅಂಬಾನಿಯ ವ್ಯವಹಾರದಒಂದು ಪರ್ಸೆಂಟ್‍ಆದರೂವಾಪಸ್ಸುಬರಲಿ. ಪ್ರಸಕ್ತಚಿತ್ರರಂಗದಲ್ಲಿ ಮೋಸದ ದೂರುಗಳು ವಾಣಿಜ್ಯ ಮಂಡಳಿಗೆ ಬರುತ್ತಿದೆ.ಅದನ್ನು ನಿವಾರಿಸುವುದೇ ಪ್ರತಿ ದಿನದ ಕೆಲಸವಾಗಿದೆಅಂತಅಧ್ಯಕ್ಷರು ಹೇಳಿದ್ದಾರೆ. ಮೋಸ ಮಾಡುವವರನ್ನುಕಪ್ಪುಪಟ್ಟಿಗೆ ಸೇರಿಸಿ ನಿಷೇದಿಸಲು ಮಂಡಳಿಯಲ್ಲಿ ನಡವಳಿ ಮಾಡಿಕೊಂಡರೆ, ಮುಂದೆಇಂತಹ ಅವಘಡಗಳು ಬರುವುದಿಲ್ಲವೆಂದು ಲಹರಿವೇಲು ಸಲಹೆ ನೀಡಿದರು. ಚಿತ್ರವುಡಿಟಿಎಸ್ ಹಂತದಲ್ಲಿಇರಲಿದ್ದು, ಜುಲೈ ತಿಂಗಳಲ್ಲಿ ತೆರೆಕಾಣುವ ಸಾದ್ಯತೆಇದೆ
Pingback: trik pkv games