ಬೆಂಗಳೂರು : ಸ್ಯಾಂಡಲ್ ವುಡ್ ನ ನ್ಯೂ ಲೀಡರ್ ಡಾ. ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಇಂದು ಮಹತ್ವದ ಸಭೆಯೊಂದು ನಡೆದಿದೆ. ಕನ್ನಡ ಚಿತ್ರರಂಗದ ಭವಿಷದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಸಭೆಯಲ್ಲಿ ಸಚಿವ ಸಿಟಿ ರವಿ, ಡಾ. ಶಿವರಾಜ್ ಕುಮಾರ್, ವಿ ರವಿಚಂದ್ರನ್, ರಮೇಶ್ ಅರವಿಂದ್, ಯಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ , ಶ್ರೀ ಮುರುಳಿ, ನಿರ್ಮಾಪಕ ಶ್ರೀಕಾಂತ, ದುನಿಯ ವಿಜಯ ಭಾಗವಹಿಸಿದ್ದರು.
ಕೊರೊನಾ ಎಫೆಕ್ಟ್ ನಿಂದಾಗಿ ಇಡಿ ದೇಶವೇ ಲಾಕ್ ಡೌನ್ ಆಗಿತ್ತು. ಲಾಕ್ ಡೌನ್ ಪರಿಣಾಮ ದಿಂದಾಗಿ ಎಲ್ಲಾ ಕ್ಷೇತ್ರಗಳು ಸಾಕಷ್ಟು ತೊಂದರೆ ಅನುಭವಿಸಿವೆ. ಕನ್ನಡ ಚಿತ್ರರಂಗ ಸಹ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದೆ. ಚಿತ್ರರಂಗವನ್ನೆ ನಂಬಿಕೊಂಡ ಕಾರ್ಮಿಕರಿಗೆ ಕೆಲಸವಿಲ್ಲದೆ ನರಳುವಂತಾಗಿದೆ. ಸಿನಿಮಾ ಚಿತ್ರೀಕರಣಗಳು ಸಹ ನಿಧಾನಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕಿರುತೆರೆ ಮತ್ತು ಚಲನಚಿತ್ರ ಉದ್ಯಮವನ್ನು ಅವಲಂಬಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ಹಾಗು ಚಿತ್ರರಂಗದ ಪುನಶ್ಚೇತನದ ನೆರವಿಗಾಗಿ ಸರ್ಕಾರಕ್ಕೆ ಸಿನಿಮಾ ದಿಗ್ಗಜರು ಮನವಿ ಮಾಡಿದ್ದಾರೆ.
ಇನ್ನೂ ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ನಂತರ ನಾಯಕತ್ವದ ಕೊರತೆ ಕಾಣಿಸಿಕೊಂಡಿತ್ತು. ಚಿತ್ರರಂಗಕ್ಕೆ ಹೊಸ ನಾಯಕತ್ವದ ಅವಶಕ್ಯತೆ ಮತ್ತು ಅನಿವಾರ್ಯತೆಯಿತ್ತು. ಹಾಗಾಗಿ ಎಲ್ಲರೂ ಸೇರಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರನ್ನು ಕನ್ನಡ ಚಲನಚಿತ್ರ ರಂಗದ ನೂತನ ನಾಯಕನಾಗಿ ಆಯ್ಕೆ ಮಾಡಿದ್ದಾರೆ.
ಆಯ್ಕೆಯಾದ ಕೆಲವೇ ದಿನಗಳಲ್ಲಿ ಶಿವಣ್ಣ ಚಿತ್ರರಂಗವನ್ನು ಅವಲಂಬಿಸಿದ ಕಾರ್ಮಿಕರ ಬಗ್ಗೆ ಮತ್ತು ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ಸರ್ಕಾರಕ್ಕೆ ವಿವರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಸಚಿವ ಸಿ.ಟಿ ರವಿ ಶಿವರಾಜ್ ಕುಮಾರ್ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಿ.ಟಿ ರವಿ, ಸಭೆಯಲ್ಲಿ ಕಿರುತೆರೆ ಮತ್ತು ಚಲನಚಿತ್ರ ಉದ್ಯಮವನ್ನು ಅವಲಂಬಿಸಿರುವ ಕಾರ್ಮಿಕರಿಗೆ ಪ್ಯಾಕೇಜ್ ಹಾಗು ಚಿತ್ರರಂಗದ ಪುನಶ್ಚೇತನದ ನೆರವಿಗಾಗಿ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರ ಮಂದಿರ ತೆರೆಯಲು ಹಾಗು ದರ ನಿಗದಿ, ತೆರಿಗೆ ವಿನಾಯತಿ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಎಲ್ಲ ವಿಚಾರಗಳನ್ನು ಸಿಎಂ ಗಮನಕ್ಕೆ ತಂದು ಚರ್ಚಿಸುತ್ತೇವೆ. ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಭರವಸೆ ನೀಡಿದ್ದೇನೆ ಎಂದು ಹೇಳಿದ್ದಾರೆ.
Pingback: drinking game
Pingback: คาสิโน
Pingback: sex-toys for women rechargeable