ಆರ್ಥಿಕವಾಗಿ ದಿವಾಳಿ ಆಗಿದ್ದ ನಾಗ ಮಂಡಲ ಖ್ಯಾತಿಯ ಹಿರಿಯ ನಟಿ ವಿಜಯಲಕ್ಷ್ಮಿ ಅವರಿಗೆ ಲಕ್ಷಾಂತರ ರೂ. ನೆರವು ಹರಿದು ಬಂದಿದೆ.
ಕೆಲ ತಿಂಗಳಿನಿಂದ ಲೈವ್ ವಿಡಿಯೋ ಮೂಲಕ ಚಿತ್ರರಂಗದ ನೆರವು ಕೋರಿದ ವಿಜಯಲಕ್ಷ್ಮಿಯವರಿಗೆ ರಾಜ್ಯದ ಅಭಿಮಾನಿಗಳು 6 ಲಕ್ಷಕ್ಕೂ ಹೆಚ್ಚಿನ ಹಣವನ್ನು ದೇಣಿಗೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯಲಕ್ಷ್ಮಿ, “ನಾನು ನನ್ನ ಜೀವನದಲ್ಲಿ ಇಷ್ಟೊಂದು ಹಣ ನೋಡಿಲ್ಲ. ನನಗೆ ಕರ್ನಾಟಕದ ಜನರು ತುಂಬಾ ಸಹಾಯ ಮಾಡಿದ್ದಾರೆ. ಶಿವರಾಜ್ ಕುಮಾರ್, ಯಶ್ ಎಲ್ಲರೊಟ್ಟಿಗೆ ಮಾತನಾಡಿದ್ದೇನೆ. ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ. ನಾನು ಕರ್ನಾಟಕದಲ್ಲಿ ಭಿಕ್ಷುಕಿ. ನಾನು ಭಿಕ್ಷೆ ಬೇಡುತ್ತೇನೆ ನನಗೆ ಮುಜುಗರವಿಲ್ಲ. ನನ್ನ ಅಕ್ಕ, ಅಮ್ಮನನ್ನು ಉಳಿಸಿಕೊಳ್ಳಲು ನಾನು ಭಿಕ್ಷೆ ಬೇಡಿದೆ” ಎಂದಿದ್ದಾರೆ.
ಆರು ಲಕ್ಷ ಹಣ ಬಹಳ ದೊಡ್ಡದು ಎಂದಿರುವ ವಿಜಯಲಕ್ಷ್ಮಿ ಆ ಹಣವನ್ನು ವಾಣಿಜ್ಯ ಮಂಡಳಿ ಮೂಲಕ ಜನಸ್ನೇಹಿ ನಿರಾಶ್ರಿತರ ಆಶ್ರಮಕ್ಕೆ ನೀಡಿದ್ದಾರೆ.
ಸಮಸ್ಯೆ ಎಲ್ಲ ಬಗೆಹರಿದ ಬಳಿಕ ನಟನೆಯ ಕಡೆಗೆ ಮರಳುವ ಇಂಗಿತವನ್ನು ವಿಜಯಲಕ್ಷ್ಮಿ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅವರು, “ನಾನು ಸತ್ತರೆ ನನ್ನನ್ನು ಕರ್ನಾಟಕದಲ್ಲಿಯೇ ಮಣ್ಣು ಮಾಡಬೇಕು” ಎಂದು ಭಾವುಕರಾಗಿ ಹೇಳಿದ್ದಾರೆ.
_______

Be the first to comment