ಸ್ಯಾಂಡಲ್ ವುಡ್ ತಳುಕು ಹಾಕಿಕೊಂಡಿರುವ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲೀಗ ನಟಿ ಪಾರುಲ್ ಯಾದವ್ ಹೆಸರು ಮುಂಚೂಣಿಗೆ ಬಂದಿದೆ. ಹಾಗಂತ ಅವರು ಕೂಡ ಇದ್ದಾರೆಯೇ ಅಂತಲ್ಲ. ಪರೋಕ್ಷವಾಗಿ ಅವರು ಅರೆಸ್ಟ್ ಆಗಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ, ಸಂಜನಾ ಪರವಾಗಿ ಬ್ಯಾಟ್ ಬೀಸಿದ್ದಾರೆ. ಸಮಾಜಸ್ವಚ್ಚವಾಗಬೇಕು, ಡ್ರಗ್ಸ್ ಮಾಫಿಯಾ ತೊಲಗಬೇಕು ನಿಜ, ಆದರೆ ಈ ದಂಧೆಯ ವಿಚಾರಣೆಯಲ್ಲಿ ಬರೀಮೂವರು ಮಹಿಳೆಯರಷ್ಟೇ ಇದ್ದಾರೆಯೇ ?ಎನ್ನುವ ಪರೋಕ್ಷವಾಗಿ ಪುರುಷಾಧಿಪತ್ಯದ ಸಮಾಜ ಮತ್ತು ಮಹಿಳೆಯನ್ನು ಕಟ್ಟಿ ಹಾಕುವ ಕ್ರಮವನ್ನು ಪ್ರಶ್ನಿಸಿದ್ದಾರೆ.
ಅವರು ಹಾಕಿರುವ ಟ್ವಿಟ್ ಹೀಗಿದೆ.#sandalwood drug’s
ಕೇವಲ ಮೂವರು ನಟಿಯರು ಮಾತ್ರನಾ? ”ಕೊನೆಗೂ ಲಿಂಗ ಸಮಾನತೆ ಹೋರಾಟಕ್ಕೆ ಜಯ ಸಿಕ್ಕಿದೆ. ಡ್ರಗ್ಸ್ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕು. ಆದರೆ, ಭಾರತದಲ್ಲಿ ಡ್ರಗ್ಸ್ ಮಾರಾಟಗಾರರು ಅಥವಾ ಬಳಕೆದಾರರು ಕೇವಲ ಮೂವರು ನಟಿಯರು ಮಾತ್ರನಾ? ಸ್ಯಾಂಡಲ್ವುಡ್ ಡ್ರಗ್ಸ್ ದಂಧೆಯಲ್ಲಿ ಬೇರೆ ಯಾರೂ ಭಾಗಿಯಾಗಿಲ್ಲವೇ?” ಎಂದು ನಟಿ ಪಾರೂಲ್ ಪ್ರಶ್ನಿಸಿದ್ದಾರೆ.
ನಟರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲವೇ? ”ಕಾರ್ಪೋರೆಟ್ ವ್ಯಕ್ತಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಅಥವಾ ಸಿನಿಮಾ ನಟರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿಲ್ಲವೇ? ಲಿಂಗ ಸಮಾನತೆಯ ಹೋರಾಟವನ್ನು ನಾವು ಗೆದ್ದಿದ್ದೇವೆ ಎಂದು ಸಂತೋಷ ಪಡಬೇಕೆ ಅಥವಾ ಕೆಲವರನ್ನು ಮಾತ್ರ ಟಾರ್ಗೆಟ್ ಮಾಡುವುದು ಸುಲಭ ಎಂದು ನಾವು ವ್ಯಥೆ ಪಡಬೇಕೆ?” ಎಂದು ಪಾರೂಲ್ ಕಿಡಿಕಾರಿದ್ದಾರೆ.
Pingback: fuck doll