ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಂಭಾಷಣೆ ಬರಹಗಾರ ಗುರು ಕಶ್ಯಪ್ (45) ಹೃದಯಾಘಾತ ನಿಧನರಾಗಿದ್ದಾರೆ.
ಸೋಮವಾರ ರಾತ್ರಿ ಗುರು ಕಶ್ಯಪ್ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗುರು ಕಶ್ಯಪ್ ಅವರು ಸುರಸುಂದರಾಂಗ ಜಾಣ, ಪುಷ್ಪಕ ವಿಮಾನ, ‘ದೇವಕಿ’ ‘ಇನ್ಸ್‌ಪೆಕ್ಟರ್ ವಿಕ್ರಮ್’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದರು.ಇನ್ನೂ ತೆರೆ ಕಾಣಬೇಕಾಗಿರುವ ಡಾಲಿ ಧನಂಜಯ ನಟನೆಯ ‘ಮಾನ್ಸೂನ್ರಾಗ’, ಶಿವರಾಜ್ಕುಮಾರ್ಅಭಿನಯದ ‘ಬೈರಾಗಿ’ ಮುಂತಾದ ಸಿನಿಮಾಗಳಿಗೆ ಗುರು ಡೈಲಾಗ್ ಬರೆದಿದ್ದಾರೆ.
ಗುರು ಕಶ್ಯಪ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
“ಗುರು ನಿಧನದ ಮೂಲಕ ಉತ್ತಮ ಸಂಭಾಷಣಕಾರನನ್ನು ಕನ್ನಡ ಚಿತ್ರರಂಗ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ‘ಪುಷ್ಪಕ ವಿಮಾನ’ ನಿರ್ದೇಶಕ ರವೀಂದ್ರನಾಥ್ ಹೇಳಿದ್ದಾರೆ.
“ಗುರು ಕಶ್ಯಪ್ ನಿಧನ ಶಾಕಿಂಗ್. ಈ ಸತ್ಯವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ತಾಳ್ಮೆಯಿಂದ ನನ್ನ ಕಥೆಗಳನ್ನು ಕೇಳಿ ಅವುಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದರು. ನಿಮ್ಮ ಬರಹಗಳ ಫಸ್ಟ್ಡ್ರಾಫ್ಟ್ ಓದುವುದನ್ನು ಮಿಸ್ಮಾಡಿಕೊಳ್ಳುತ್ತೇನೆ ಸರ್”‘ ಎಂದು ನಟಿ ಆರೋಹಿ ನಾರಾಯಣ್ ಸಂತಾಪ ಸೂಚಿಸಿದ್ದಾರೆ.
_________





Be the first to comment