ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ…!

ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಹಾಗೂ ಮಾನವೀಯ ಮನಸ್ಸುಳ್ಳ ನಟ ಸಂಚಾರಿ ವಿಜಯ್ ತಮ್ಮ 38 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಶನಿವಾರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸಂಚಾರಿ ವಿಜಯ್ ರನ್ನು ಚಿಕಿತ್ಸೆಗಾಗಿ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಂಚಾರಿ ವಿಜಯ್ ಇಹಲೋಕ ತ್ಯಜಿಸಿದ್ದಾರೆ.

ಕೊರೋನಾ ಸಂಕಷ್ಟದಲ್ಲಿರುವವರಿಗೆ ಫುಡ್ ಕಿಟ್ ವಿತರಿಸಿ ವಾಪಸ್ಸಾಗುತ್ತಿದ್ದ ವೇಳೆ ಸಂಚಾರಿ ವಿಜಯ್ ಸವಾರಿ ಮಾಡುತ್ತಿದ್ದ ಬೈಕ್ ಅಪಘಾತಕ್ಕಿಡಾಗಿತ್ತು ಎನ್ನಲಾಗಿದೆ. ಈ ವೇಳೆ ತೀವ್ರಗಾಯಗೊಂಡ ಸಂಚಾರಿ ವಿಜಯ್ ಬ್ರೇನ್ ಆಫರೇಶನ್ ಮಾಡಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆಯ 26 ಗಂಟೆಗಳ ಬಳಿಕವೂ ಬ್ರೇನ್ ಸ್ಪಂದಿಸದ ಹಿನ್ನೆಲೆಯಲ್ಲಿ ಬ್ರೇನ್ ಡೆಡ್ ನಿಂದ ವಿಜಯ್ ನಿಧನರಾಗಿದ್ದಾರೆ.

ಅಪಘಾತದ ವೇಳೆ ಸಂಚಾರಿ ವಿಜಯ್ ಬ್ರೇನ್ ಹಾಗೂ ತೊಡೆಗೆ ತೀವ್ರ ಗಾಯಗಳಾಗಿತ್ತು. ತಕ್ಷಣ ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ವಿಜಯ್ ಆಫರೇಶನ್ ಬಳಿಕ ಕೋಮಾಗೆ ಜಾರಿದ್ದು ಚೇತರಿಸಿಕೊಂಡಿಲ್ಲ.

2007 ರಲ್ಲಿ ಚಿತ್ರರಂಗ ಪ್ರವೇಶಿಸಿದ ಸಂಚಾರಿ ವಿಜಯ್ ಕನ್ನಡ,ತೆಲುಗು,ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ನಾನು ಅವನಲ್ಲ ಅವಳು ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ವಿಜಯ್ ಸದಾ ಮಾನವೀಯತೆಯಿಂದ ಹಾಗೂ ಸರಳ ವ್ಯಕ್ತಿತ್ವದಿಂದ ಚಿತ್ರರಂಗದ ಮನಸ್ಸು ಗೆದ್ದಿದ್ದರು.

ಸಂಚಾರಿ ವಿಜಯ್ ಅಪಘಾತದ ಸುದ್ದಿತಿಳಿಯುತ್ತಿದ್ದಂತೆ ನಟ ಸುದೀಪ್ ಸಂಚಾರಿ ವಿಜಯ್ ಆಫರೇಶನ್ ಗೆ ನೆರವಾಗಿದ್ದು, ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದರು.

ಆದರೆ ಚಿಕಿತ್ಸೆಗೆ ಸ್ಪಂದಿಸಿದ ಸಂಚಾರಿ ವಿಜಯ್ ಕುಟುಂಬ ಹಾಗೂ ಅಭಿಮಾನಿಗಳನ್ನು ಅಗಲಿ ಹೋಗಿದ್ದಾರೆ. ಸುದೀಪ್ ಟ್ವೀಟ್ ನಲ್ಲಿ ಸಂಚಾರಿ ವಿಜಯ್ ನಿಧನದ ಸಂಗತಿಯನ್ನು ಹಂಚಿಕೊಂಡಿದ್ದು, ಸಂತಾಪ ಸೂಚಿಸಿದ್ದಾರೆ.

ಸಂಚಾರಿ ವಿಜಯ್ ನಿಧನಕ್ಕೆ ಸ್ಯಾಂಡಲ್ ವುಡ್ ನಟ,ನಿರ್ದೇಶಕರು,ನಿರ್ಮಾಪಕರು,ಅಭಿಮಾನಿಗಳು, ಸಂಸದರು,ಶಾಸಕರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುವ ಪೋಸ್ಟ್ ಹಾಕಿ ಗೌರವ ಸಲ್ಲಿಸಿದ್ದಾರೆ.

This Article Has 1 Comment
  1. Akshay Reply

    It’s really toughf to digest that sanchari Vijay is no more for their family god gives strength to digest this news it’s really hard news he was a wonderful actor and such a humble person I met him in one function he was so simple he talked with me full day it was my great day that I was talked with him full day he also wish me that all the best for your future akshay but when I heard news he got accident it was shocking to me I am very sad that I couldn’t come to hospital to see him due to this lock down

Leave a Reply

Your email address will not be published. Required fields are marked *

Translate »
error: Content is protected !!