ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರ ಸ್ಯಾಂಡಲ್ ವುಡ್ ಪಯಣಕ್ಕೆ 11 ವರ್ಷ ತುಂಬಿದ್ದು 12ನೆಯ ವರ್ಷಕ್ಕೆ ಕಾಲಿಟ್ಟಿದ್ದಾರೆ.
ರಕ್ಷಿತ್ ಶೆಟ್ಟಿ 2010ರ ಜುಲೈ 23ರಂದು ‘ನಮ್ ಏರಿಯಲ್ ಒಂದಿನಾ’ ಸಿನಿಮಾ ಮೂಲಕ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ‘ತುಘಲಕ್’ ಚಿತ್ರದ ಮೂಲಕ ತೆರೆಯ ಮೂಲಕ ಕಾಣಿಸಿಕೊಂಡಿದ್ದರು. ಈ ಎರಡೂ ಚಿತ್ರಗಳು ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಆದರೆ ಬಳಿಕ ಬಂದ ‘ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಚಿತ್ರ ರಕ್ಷಿತ್ ಶೆಟ್ಟಿ ಗೆ ಸಾಕಷ್ಟು ಹೆಸರು ತಂದು ಕೊಟ್ಟಿತು. ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಅವರು ನಾಯಕಿಯಾಗಿ ನಟಿಸಿದ್ದರು.
2014ರಲ್ಲಿ ರಕ್ಷಿತ್ ಶೆಟ್ಟಿ ಅವರು ‘ಉಳಿದವರು ಕಂಡಂತೆ’ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದು ಯಶಸ್ಸು ಕಂಡರು.
‘ವಾಸ್ತು ಪ್ರಕಾರ’, ‘ ರಿಕ್ಕಿ ‘, ‘ ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಕಾಣಿಸಿದ ರಕ್ಷಿತ್ ಶೆಟ್ಟಿಗೆ
ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ದೊಡ್ಡ ಮಟ್ಟದ ಹೆಸರು ಪಡೆದರು.
ಇತ್ತೀಚೆಗೆ ರಕ್ಷಿತ್ ಶೆಟ್ಟಿ ಅವರು, ಶ್ರೀಮನ್ನಾರಾಯಣ ಸಿನಿಮಾ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ.
ಬ್ಯುಸಿ ಆಗಿರುವ ರಕ್ಷಿತ್ : ರಕ್ಷಿತ್ ಶೆಟ್ಟಿ ಈಗ ‘ 777 ಚಾರ್ಲಿ’ ಚಿತ್ರೀಕರಣ ಮುಗಿಸಿ ‘ಸಪ್ತ ಸಾಗರದಾಚೆ ‘ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ ತಿಂಗಳಿನಲ್ಲಿ ‘ರಿಚರ್ಡ್ ಆಂಟನಿ’ ಸಿನಿಮಾ ಘೋಷಣೆ ಮಾಡಿದ್ದು ರಕ್ಷಿತ್ ಶೆಟ್ಟಿ ಇದನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೊಂಬಾಳೆ ಫಿಲಂಮ್ಸ್ ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ.
ರಕ್ಷಿತ್ ಶೆಟ್ಟಿ 11 ವರ್ಷ ಪೂರೈಸಿದ ಬಗ್ಗೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಸಿನಿ ಪ್ರಯಾಣ ಇನ್ನೂ ಯಶಸ್ಸಿನ ಹಾದಿ ಹಿಡಿಯಲಿ ಎಂದು ಶುಭ ಹಾರೈಸಿದ್ದಾರೆ.
ಇದೇ ವೇಳೆ ತಮ್ಮ ಸಿನಿ ಪ್ರಯಾಣದಲ್ಲಿ ಜೊತೆಗೆ ಇರುವ ಅಭಿಮಾನಿಗಳಿಗೆ ರಕ್ಷಿತ್ ಶೆಟ್ಟಿ ಅವರು ಧನ್ಯವಾದ ತಿಳಿಸಿದ್ದಾರೆ.




___________





Be the first to comment