ಸದ್ದು ಮಾಡುತ್ತಿದೆ ‘ಪುಕ್ಸಟ್ಟೆ ಲೈಫು’

ಅಕಾಲಿಕವಾಗಿ ಮರಣ ಅಪ್ಪಿದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ನಟನೆಯ ‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಪ್ರಶಂಸೆಗೆ ಪಾತ್ರವಾಗಿದೆ.

ಸಿನೆಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು, ” ಈ ಚಿತ್ರದ ಟ್ರೈಲರ್ ನೋಡಿದಾಗ ನನಗೂ ಒಂದು ಪಾತ್ರ ನೀಡಬೇಕಿತ್ತು. ಕಾಸೇ ತೆಗೆದುಕೊಳ್ಳದೆ ನಾನು ನಟಿಸುತ್ತಿದ್ದೆ. ನನಗೆ ಪಾತ್ರ ಸಿಗಲಿಲ್ಲವಲ್ಲ ಎಂದು ಹೊಟ್ಟೆ ಉರಿಯುತ್ತಿದೆ” ಎಂದು ಹಾಸ್ಯವಾಗಿ ಹೇಳಿದರು.

” ಚಿತ್ರದ ಟ್ರೈಲರ್ ಕುತೂಹಲ ಮೂಡಿಸುತ್ತದೆ. ಕಮರ್ಷಿಯಲ್ ಹಾಗೂ ಕಲಾತ್ಮಕ ಚಿತ್ರಗಳು ಒಗ್ಗೂಡಿ ದಂತೆ ಈ ಚಿತ್ರ ಭಾಸವಾಗುತ್ತಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಚಾರಿ ವಿಜಯ್ ಮರೆಯಾಗಿರುವುದು ದುಃಖದ ವಿಚಾರ. ಚಿತ್ರ ಯಶಸ್ಸಿನ ಹಾದಿ ಹಿಡಿಯಲಿ” ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಂಗಾಯಣ ರಘು, ಅಚ್ಚುತ ಕುಮಾರ್, ಇತರರು ಇದ್ದರು.

ಚಿತ್ರವನ್ನು ಅರವಿಂದ್ ಕುಪ್ಲೀಕರ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ಮಾತಂಗಿ ಪ್ರಸನ್ನ ನಟಿಸಿದ್ದಾರೆ. ಇವರು ಈ ಹಿಂದೆ ‘ಕಹಿ’ ಸಿನಿಮಾದಲ್ಲಿ ನಟಿಸಿದ್ದರು.

ಚಿತ್ರಕ್ಕೆ ಸುರೇಶ್ ಆರ್ಮುಗಂ ಸಂಕಲನ, ವಾಸು ಧೀಕ್ಷಿತ್ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಗರಾಜ್ ಸೋಮಯಾಜಿ ಅವರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

‘ಪುಕ್ಸಟ್ಟೆ ಲೈಫು’ ಚಿತ್ರದಲ್ಲಿ ಸಂಚಾರಿ ವಿಜಯ್ ಅವರು ಕಳ್ಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚುತ ಕುಮಾರ್ ಅವರು ಪೊಲೀಸ್ ಪಾತ್ರದಲ್ಲಿದ್ದು ಚಿತ್ರದ ಟ್ರೈಲರ್ ಸಾಕಷ್ಟು ಕುತೂಹಲ ಮೂಡಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!