'ಸಂಪ್ರದಾಯ' ಕನ್ನಡ ಕಿರುಚಿತ್ರ

‘ಸಂಪ್ರದಾಯ’ ಕನ್ನಡ ಕಿರುಚಿತ್ರ ಬಿಡುಗಡೆ

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಋತುಸ್ಪರ್ಶ ಅಭಿನಯದ ‘ಸಂಪ್ರದಾಯ’ ಕನ್ನಡ ಕಿರು ಚಿತ್ರ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಆತ್ರೆಯ ಕ್ರಿಯೇಷನ್ಸ್ ಪ್ರೊಡಕ್ಷನ್ ನ ಡಿ ಸಿ ವೀರೇಂದ್ರ ಬೆಳ್ಳಿಚುಕ್ಕಿ ನಿರ್ದೇಶನ ಹಾಗೂ ಡಾ.ಸುಮಿತಾ ಪ್ರವೀಣ್ ನಿರ್ಮಾಣದ ‘ಸಂಪ್ರದಾಯ’ ಕನ್ನಡ ಕಿರು ಚಿತ್ರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಪ್ರಸ್ತುತ ಹಬ್ಬಗಳ ಆಚರಣೆಯಲ್ಲಿ ಗಣೇಶನ ಹಬ್ಬ ಈ ರೀತಿ ಆದರೆ ಹೇಗೆ ಎಂಬ ಪ್ರಶ್ನೆಯೊಂದಿಗೆ ಶುರುವಾಗುತ್ತದ.

1893ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶ ಉತ್ಸವದ ಬಗ್ಗೆ ಹೊಗಳಿ ಬರೆದರು. ಆಗ ಗಣೇಶ ಉತ್ಸವ ಒಂದು ಸಂಚಲನವನ್ನು ಮೂಡಿಸಿತು. ಅಷ್ಟೇ ಅಲ್ಲ ಗಣೇಶ ಉತ್ಸವವನ್ನು ಪ್ರತಿ ವರ್ಷ ಅತ್ಯಂತ ವ್ಯವಸ್ಥಿತವಾಗಿ ಆಚರಣೆ ಮಾಡುವ ಎಲ್ಲಾ ವ್ಯವಸ್ಥೆಗಳನ್ನು ತಿಲಕರು ಮಾಡಿದರು.

ನಮ್ಮ ಎಲ್ಲಾ ಹಬ್ಬಗಳಲ್ಲಿ ಅತ್ಯಂತ ಅದ್ದೂರಿ ಹಾಗೂ ಕಲರ್ ಪುಲ್ ಹಬ್ಬ ಅಂದರೆ ಅದು ಗೌರಿ ಗಣೇಶ ಹಬ್ಬ ಮನೆ ಮನೆಗಳಲ್ಲಿ ಪೂಜಿಸುವ, ಮನ ಮನಗಳಲ್ಲಿ ಆರಾಧಿಸುವ ದೈವ ಗಣೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಹಬ್ಬಗಳ ಆಚರಣೆಯಲ್ಲಿ ಗಣೇಶನ ಹಬ್ಬ ಈ ರೀತಿ ಆದರೆ ಹೇಗೆ ಎಂಬ ಪ್ರಶ್ನೆಯೊಂದಿಗೆ ಶುರುವಾಗುತ್ತದೆ.

ಗಣೇಶನ ತಾಯಿ ಪಾರ್ವತಿಯಾಗಿ ಮತ್ತು ಸರಸ್ವತಿ, ಐಶ್ವರ್ಯ ಲಕ್ಷ್ಮಿಯಾಗಿ, ಅನ್ನಪೂರ್ಣಿಮೆ , ದುರ್ಗಾ ಮಾತೆ, ಚಾಮುಂಡಿ ಅವತಾರವಾಗಿ, ಮನುಷ್ಯ ಎಲ್ಲಿವರೆಗೆ ಮಾನವೀಯತೆಯನ್ನು ಮರೆತು ಕೌರ್ಯದೆಡೆಗೆ ಹೋಗುವನು ಅಂದು ಈಗ ಅವತಾರವಾಗಿ ನಾನು ಬರುವೆ ರಕ್ಕದ ಸಂಹಾರವೇ
ನನ್ನ ದೇಯ ಎನ್ನುವ ಈ ಚಿತ್ರದ ಸಂಭಾಷಣೆಯೊಂದಿಗೆ ನಟಿ ಋತುಸ್ಪರ್ಶ ತುಂಬಾ ಅದ್ಭುತವಾಗಿ ಅಭಿನಯಿಸಿದ್ದಾಳೆ.

ಆರನೇ ತರಗತಿ ವಿದ್ಯಾರ್ಥಿನಿ ಸ್ಪರ್ಶಳನ್ನು ಋತುಸ್ಪರ್ಶ ಹೆಸರಲ್ಲಿ ಸಿನಿಮಾ ಪರದೆಗೆ ಪರಿಚಯಿಸಲಾಗಿದೆ . ಸ್ಪರ್ಶ ಹುಟ್ಟಿದ್ದು ಬೆಂಗಳೂರಿನಲ್ಲಿ. ಈಕೆ ಶಿವಮೊಗ್ಗದ ಸುಮಿತ ಮತ್ತು ಮುಂಬೈ ಮೂಲದ ಪ್ರವೀಣ್ ದಂಪತಿಯ ಏಕೈಕ ಪುತ್ರಿ. ಗಾರ್ಡನ್ ಸಿಟಿ ಪಬ್ಲಿಕ್ ಸ್ಕೂಲ್ ಮಲ್ಲೇಶ್ವರದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯಾಗಿರುವ ಸ್ಪರ್ಶ ಕಥಕ್, ಯಕ್ಷಗಾನ, ಹಿಪ್ ಹಾಪ್, ಬಾಲಿವುಡ್, ಭರತನಾಟ್ಯ ಕಲಿಯುತ್ತಿದ್ದಾಳೆ.

ತಾಯಿಗೆ ಈಕೆಯ ಡಾನ್ಸಿಂಗ್ ಪ್ರತಿಭೆಯನ್ನು ಸಿನಿಮಾದ ಮೂಲಕ ಬೆಳಕಿಗೆ ತರುವ ಮನಸಾಗಿ ‘ಟೇಕ್ವಾಂಡೋ ಗರ್ಲ್’ ಚಿತ್ರ ನಿರ್ಮಾಣ ಆಯಿತು ಈಗ ‘ಸಂಪ್ರದಾಯ ‘ ಕಿರು ಚಿತ್ರದ
ಮೂಲಕ ಬಾಲಕಿಯ ಮತ್ತೊಂದು ಮುಖವನ್ನು ಅನಾವರಣ ಮಾಡಿದ್ದಾರೆ ಅದರ ಲಿಂಕ್ ಈ ಕೆಳಗಿನಂತಿದೆ ನೋಡಿ ಹಾರೈಸಿ
__

Be the first to comment

Leave a Reply

Your email address will not be published. Required fields are marked *

Translate »
error: Content is protected !!