‘ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌’ನಿಂದ ಯುಗ ಪ್ರವರ್ತಕ ಅವಳಿ ಯೋಜನೆಗಳ ಅನಾವರಣ

2000ನೇ ದಶಕದ ಆರಂಭದಲ್ಲಿ ಪ್ರಶಸ್ತಿ-ಪುರಸ್ಕೃತ ಅಮ್ಯೂಸ್‌ಮೆಂಟ್‌ ಪಾರ್ಕ್‌ ಅನ್ನು ಯಶಸ್ವಿಯಾಗಿ ನಿರ್ಮಿಸಿದ್ದ ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ ಸಂಸ್ಥೆಯು, ಇದೀಗ ಬೆಂಗಳೂರಿನಲ್ಲಿ ಅತ್ಯಾಧುನಿಕ ಮತ್ತು ವೈಭೋಗಯುತ ವಸತಿ ಸಮುದಾಯವನ್ನು ರೂಪಿಸುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರ ಹೃದಯಭಾಗದ ನಡುವೆ ಅತ್ಯುತ್ತಮವಾದ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಈ ಉನ್ನತ ಮಟ್ಟದ ನಿವಾಸಗಳಿಗಾಗಿ ಎಂಬೆಸಿ ಬೊಲೆವಾರ್ಡ್, ಗೋದ್ರೇಜ್, ಅಸೆಟ್ಜ್, ಪೂರ್ವಂಕರ ಮುಂತಾದ ಪ್ರತಿಷ್ಠಿತ ಬೃಹತ್ ನಿರ್ಮಾಣ ಪಾಲುದಾರರೊಂದಿಗೆ ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ ಕೈಜೋಡಿಸಿದೆ. ಅಂತರಾಷ್ಟ್ರೀಯ ಹಾಗೂ ಅಮೇರಿಕಾದ ವಾಸ್ತುಶಿಲ್ಪ ಶೈಲಿಯಲ್ಲಿ ವಿನ್ಯಾಸಗೊಂಡಿರುವ ಈ ಯೋಜನೆಯು ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಪ್ರಸ್ತುತ ಅತ್ಯಂತ ಬೇಡಿಕೆಯಲ್ಲಿದೆ. ನೋಂದಣಿಗಾಗಿ ಈಗ ಅವಕಾಶ ಕಲ್ಪಿಸಲಾಗಿದೆ.

ಸೃಜನಶೀಲತೆ ಮತ್ತು ಶ್ರೇಷ್ಠತೆಯ ಸಂಭ್ರಮದ ದ್ಯೋತಕವಾಗಿ, ಸ್ಯಾಮಿಸ್ ಡ್ರೀಮ್‌ಲ್ಯಾಂಡ್ ತನ್ನ ಎರಡು ಹೆಗ್ಗುರುತಿನ ವಸತಿ ಯೋಜನೆಗಳಾದ – *ನೇಚರ್ಸ್ ಬೊಲೆವಾರ್ಡ್* ಮತ್ತು *ಸನ್‌ರೈಸ್ ಬೊಲೆವಾರ್ಡ್* – ಇವುಗಳನ್ನು ನಿನ್ನೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಚಾನೆಲ್ ಪಾಲುದಾರರ ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮಾವೇಶದಲ್ಲಿ ಹೆಮ್ಮೆಯಿಂದ ಲೋಕಾರ್ಪಣೆಗೊಳಿಸಿತು.

ಈ ಭವ್ಯ ಸಮಾರಂಭವು ದೂರದೃಷ್ಟಿ, ಸಂಸ್ಕೃತಿ ಮತ್ತು ಸಮುದಾಯದ ಚೈತನ್ಯವನ್ನು ಮೇಳೈಸಿದ್ದು, ಈ ಸಂದರ್ಭಕ್ಕೆ ನಾಲ್ವರು ವಿಶಿಷ್ಟ ವ್ಯಕ್ತಿಗಳು ಆಗಮಿಸಿ ತಮ್ಮ ಉಪಸ್ಥಿತಿಯಿಂದ ಮೆರುಗು ನೀಡಿದರು:

* ಕುಮಾರಿ ಸ್ವೀಝಲ್ ಫರ್ಟಾಡೊ, ಮಿಸ್ ಗ್ಲೋಬಲ್ ಇಂಡಿಯಾ 2024
* ಶ್ರೀ ಇಂದ್ರಜಿತ್ ಲಂಕೇಶ್, ಪ್ರಖ್ಯಾತ ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು
* ಶ್ರೀಮತಿ ರೇವತಿ ಎಸ್. ಕಾಮತ್, ಮೇರು ವಾಸ್ತುಶಿಲ್ಪಿ ಹಾಗೂ ಝೆರೋಧಾ ಸಂಸ್ಥಾಪಕರಾದ ಶ್ರೀ ನಿತಿನ್ ಮತ್ತು ಶ್ರೀ ನಿಖಿಲ್ ಕಾಮತ್ ಅವರ ಹೆಮ್ಮೆಯ ಮಾತೃಶ್ರೀ
* ಶ್ರೀ ಸ್ಯಾಮಿ ನನ್ವಾನಿ, ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನ ಅಧ್ಯಕ್ಷರು, ಸುಪ್ರಸಿದ್ಧ ನಿರ್ಮಾಪಕರು ಮತ್ತು ದಾನಶೀಲರು

ಈ ಅವಳಿ ಯೋಜನೆಗಳ ಅನಾವರಣವು, ಆಧುನಿಕ ಹಾಗೂ ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಕೂಡಿದ ಜೀವನಶೈಲಿಯನ್ನು ಪುನರ್‌ ವ್ಯಾಖ್ಯಾನಿಸುವ ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನ ಪಯಣದಲ್ಲಿ ಒಂದು ಮಹತ್ವಪೂರ್ಣ ಮೈಲಿಗಲ್ಲು. ನೇಚರ್ಸ್ ಬೊಲೆವಾರ್ಡ್ ಮತ್ತು ಸನ್‌ರೈಸ್ ಬೊಲೆವಾರ್ಡ್ ಎರಡೂ ಯೋಜನೆಗಳು, ಅತ್ಯಂತ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ, ಪರಿಸರ ಪ್ರಜ್ಞೆಯುಳ್ಳ ಮತ್ತು ಉನ್ನತ ಜೀವನಶೈಲಿ ಹಾಗೂ ಸ್ವಾಸ್ಥ್ಯವನ್ನು ಆಧರಿಸಿದ ನೆಲೆಗಳನ್ನು ನಿರ್ಮಿಸುವಲ್ಲಿ ಸಂಸ್ಥೆಯು ಹೊಂದಿರುವ ಅಚಲವಾದ ಬದ್ಧತೆಯನ್ನು ಪ್ರತಿಫಲಿಸುತ್ತವೆ.

ಈ ಯೋಜನೆಗಳ ಹಿಂದಿನ ದಾರ್ಶನಿಕರಾದ ಶ್ರೀ ಸ್ಯಾಮಿ ನನ್ವಾನಿ ಅವರು, ಸಮುದಾಯ-ಕೇಂದ್ರಿತ ನಗರ ವಿಕಾಸದ ಕುರಿತಾದ ತಮ್ಮ ದೀರ್ಘಕಾಲೀನ ಮುನ್ನೋಟವನ್ನು ಸಭಿಕರೊಂದಿಗೆ ಹಂಚಿಕೊಂಡರು. “ನೇಚರ್ಸ್ ಬೊಲೆವಾರ್ಡ್ ಮತ್ತು ಸನ್‌ರೈಸ್ ಬೊಲೆವಾರ್ಡ್‌ಗಳ ಮೂಲಕ, ನಾವು ಕೇವಲ ಗೃಹಗಳನ್ನು ನಿರ್ಮಿಸುತ್ತಿಲ್ಲ – ಬದಲಾಗಿ, ಪ್ರಕೃತಿ ಮತ್ತು ಆಧುನಿಕತೆಗಳು ಸುಲಲಿತವಾಗಿ ಒಂದಾಗುವ ಸಾಮರಸ್ಯದ ತಾಣಗಳನ್ನು ನಾವು ಸೃಷ್ಟಿಸುತ್ತಿದ್ದೇವೆ,” ಎಂದು ಅವರು ನುಡಿದರು.

ಈ ಲೋಕಾರ್ಪಣಾ ಸಮಾರಂಭವು ಉದ್ಯಮದ ಅಗ್ರಗಣ್ಯರು, ಚಾನೆಲ್ ಪಾಲುದಾರರು, ಮಾಧ್ಯಮ ಬಂಧುಗಳು ಮತ್ತು ಅತಿಥಿಗಳಿಂದ ಅಭೂತಪೂರ್ವ ಹಾಗೂ ಉತ್ಸಾಹಪೂರ್ಣ ಪ್ರತಿಕ್ರಿಯೆಗೆ ಸಾಕ್ಷಿಯಾಯಿತು. ಈ ಯೋಜನೆಗಳ ಅನನ್ಯತೆಯನ್ನು ಸಾರುವ ಬೃಹತ್ ನಕ್ಷೆಗಳು (ಮಾಸ್ಟರ್ ಪ್ಲಾನ್‌ಗಳು) ಮತ್ತು ವಿಶಿಷ್ಟ ಸೌಲಭ್ಯಗಳ ವಿಶೇಷ ಪೂರ್ವಾವಲೋಕನವನ್ನು ಅವರಿಗೆ ಕಲ್ಪಿಸಲಾಯಿತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!