ವಸಿಷ್ಠ ಸಿಂಹ ನಟನೆಯ ‘ಲವ್‌ಲಿ’ ಚಿತ್ರಕ್ಕೆ ಸಮೀಕ್ಷಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಪುನೀತ್ ರಾಜ್‌ಕುಮಾರ್ ನಟನೆಯ ‘ಜೇಮ್ಸ್’ , ’99’, ಹಾಗೂ ‘ಫ್ಯಾನ್’ ಚಿತ್ರಗಳಲ್ಲಿ ನಟಿಸಿದ್ದ ಸಮೀಕ್ಷಾ ಈ ಚಿತ್ರದಲ್ಲಿ ಕಾರ್ಪೊರೇಟ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಕನ್ನಡ, ತೆಲುಗು ಎರಡೂ ಭಾಷೆಗಳಲ್ಲೂ ಛಾಪು ಮೂಡಿಸುತ್ತಿರುವ ವಸಿಷ್ಠ ಸಿಂಹ ಅವರ ಹೊಸ ಚಿತ್ರವನ್ನು ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದಾರೆ. ಚೇತನ್ ಕೇಶವ್ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ಮಾಡಲು ಹೊರಟಿದ್ದಾರೆ. ರವೀಂದ್ರ ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್ ಸಿಳೀನ್ ಸಂಗೀತ ಸಂಯೋಜನೆ ಇದೆ.
ವಸಿಷ್ಠ ಸಿಂಹ ತಮ್ಮ ಬಹುದಿನಗಳ ಕನಸಾದ ಸಿಂಹಾ ಆಡಿಯೋ ಸಂಸ್ಥೆಯನ್ನು ಆರಂಭಿಸಿದ್ದಾರೆ. ಹಂಸಲೇಖ, ಧನಂಜಯ ಸಿಂಹಾ ಆಡಿಯೋ ಸಂಸ್ಥೆಯ ಲೋಗೋವನ್ನು ಅನಾವರಣ ಮಾಡಿ ಸಂಸ್ಥೆಗೆ ಚಾಲನೆ ನೀಡಿದ್ದಾರೆ.
ಸಿಂಹಾ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಮೊದಲ ಹಾಡಾಗಿ ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ ‘ಕಾಲಚಕ್ರ’ ಚಿತ್ರದ ನೀನೇ ಬೇಕು ಹಾಡು ಬಿಡುಗಡೆಯಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಂಸಲೇಖ, ‘ವಸಿಷ್ಠ ನನ್ನ ವಿದ್ಯಾರ್ಥಿಯಾಗಿದ್ದ. ಕಂಠ ಚೆನ್ನಾಗಿದೆ ನಟನೆ ಕಡೆಗೂ ಆಸಕ್ತಿ ತೋರಿಸು ಎಂದಿದ್ದೆ ಎಂದು ಹೇಳಿದರು.
____

Be the first to comment