ಚಿತ್ರ: ಸಂಭವಾಮಿ ಯುಗೇ ಯುಗೇ
ನಿರ್ದೇಶನ: ಚೇತನ್ ಚಂದ್ರಶೇಖರ್ ಶೆಟ್ಟಿ
ನಿರ್ಮಾಣ: ಪ್ರತಿಭಾ ನರೇಶ್
ತಾರಾಗಣ: ಜಯರಾಮ್ ಶೆಟ್ಟಿ, ನಿಶಾ ರಜಪೂತ್, ಪ್ರಮೋದ್ ಶೆಟ್ಟಿ, ಸುಧಾ ರಾಣಿ, ಭವ್ಯ, ಅಶೋಕ್ ಕುಮಾರ್ ಇತರರು
ರೇಟಿಂಗ್: 3
ಗ್ರಾಮೀಣ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಚಿತ್ರವಾಗಿ ಈ ವಾರ ತೆರೆಗೆ ಬಂದಿರುವ ಸಿನಿಮಾ ಸಂಭವಾಮಿ ಯುಗೇ ಯುಗೇ.
ಚಿತ್ರದಲ್ಲಿ ಗ್ರಾಮೀಣ ಬದುಕಿನ ಭವಣೆಯ ಜೊತೆಗೆ ರಾಜಕೀಯ ಕುತಂತ್ರಗಳು, ಗ್ರಾಮವನ್ನು ಅಭಿವೃದ್ಧಿ ಮಾಡಬೇಕು ಎಂದು ಬಯಸುವ ಗ್ರಾಮ ಪಂಚಾಯತ್ ಅಧ್ಯಕ್ಷರ ವಿರುದ್ಧ ನಡೆಯುವ ಷಡ್ಯಂತ್ರಗಳು ಹೀಗೆ ಈ ಚಿತ್ರ ಧರ್ಮ, ಅಧರ್ಮಗಳ ನಡುವಿನ ಸಮರದಂತೆ ಭಾಸವಾಗುತ್ತದೆ.
ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಚಿತ್ರದಲ್ಲಿ ಗ್ರಾಮೀಣ ಬದುಕಿನ ಜೊತೆಗೆ ಅಲ್ಲಿನ ರಾಜಕೀಯ ಪರಿಸ್ಥಿತಿಯನ್ನು ತೆರೆಯ ಮೇಲೆ ಮುಂದಿಡುವ ಯತ್ನ ಮಾಡಿದ್ದಾರೆ. ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಶ್ರಮಿಸುವ ಗ್ರಾಮ ಪಂಚಾಯತ್ ಅಧ್ಯಕ್ಷನಾದ ನಾಯಕನ ವಿರುದ್ಧ ನಡೆಯುವ ಷಡ್ಯಂತ್ರದಲ್ಲಿ ಆತ ಗೆಲ್ಲುತ್ತಾನೆಯೇ ಅದಕ್ಕೆ ಚಿತ್ರವನ್ನು ನೋಡಬೇಕಿದೆ.
ನಾಯಕ ಜಯರಾಮ್ ಶೆಟ್ಟಿ ಕಷ್ಟಪಟ್ಟು ಅಭಿನಯಿಸಿದಂತೆ ಕಂಡು ಬರುತ್ತದೆ. ನಾಯಕಿ ನಿಶಾ ರಜಪೂತ್ ಅವಕಾಶವನ್ನು ಉತ್ತಮವಾಗಿ ಬೆಳೆಸಿಕೊಂಡಿದ್ದಾರೆ. ನಾಯಕನ ತಾಯಿಯಾಗಿ ಕುರುಡಿಯ ಪಾತ್ರದಲ್ಲಿ ನಡೆಸಿರುವ ಸುಧಾರಾಣಿ, ಡಿಸಿ ಪಾತ್ರ ಮಾಡಿರುವ ಪ್ರಮೋದ್ ಶೆಟ್ಟಿ, ಎಂಎಲ್ಎ ಪಾತ್ರಧಾರಿ ವಿಕ್ಟರಿ ವಾಸು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನವನ್ನು ಮಾಡಿದ್ದಾರೆ.
ಚಿತ್ರ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದಂತೆ ಕಾಣುತ್ತದೆ. ಇಂದಿನ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ಚಿತ್ರವನ್ನು ತೆರೆಯ ಮೇಲೆ ತಂದಿರುವ ನಿರ್ಮಾಪಕರ ಧೈರ್ಯಕ್ಕೆ ಭೇಷ್ ಎನ್ನಬೇಕಿದೆ. ಚಿತ್ರದ ಛಾಯಾಗ್ರಹಣ ಓಕೆ ಅನಿಸುತ್ತದೆ.
ಹಳ್ಳಿಯ ಬದುಕನ್ನು ಕಟ್ಟಿಕೊಡುವ ಈ ಚಿತ್ರವನ್ನು ಒಂದು ಬಾರಿ ವೀಕ್ಷಿಸಬಹುದು.
____

Be the first to comment