ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಚಿತ್ರದ ‘ಧೂಳ್ ಎಬ್ಬಿಸಾವ’ ಹಾಡು ಆಲ್ ಇಂಡಿಯಾ ಮ್ಯೂಸಿಕ್ ಲಿಸ್ಟಿನಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ.
ಸಮರ್ಜಿತ್, ಸಾನ್ಯಾ ಅಯ್ಯರ್ ಅಭಿನಯದ ಗೌರಿ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ ಹಾಡು ‘ಧೂಳ್ ಎಬ್ಬಿಸಾವ’ ಈಗಾಗಲೇ ಬಿಡುಗಡೆಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಇದಕ್ಕೆ ಸಿನಿಮಾ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶಿವು ಬೆರ್ಗಿ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ ಶಾಸ್ತ್ರಿ ಮತ್ತು ಅನನ್ಯ ಭಟ್ ಅವರು ಹಾಡಿದ್ದಾರೆ. ಸಮರ್ಜಿತ್ ಲಂಕೇಶ್ ಹಾಗೂ ಸಂಜನಾ ಆನಂದ್ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಭಜರಂಗಿ ಮೋಹನ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ಈ ಹಾಡು ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಲ್ಲಿ ಟಾಪ್ 5 ಟ್ರೆಂಡಿಂಗ್ ನಲ್ಲಿದೆ. ಲಕ್ಷಾಂತರ ಜನರು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.
ಆಲ್ ಇಂಡಿಯಾ ಲೆವೆಲ್ ಟ್ರೆಂಡಿಂಗ್ ನಲ್ಲಿ ಸೌತ್ ಹಾಡುಗಳ ಬಗ್ಗೆ ಕಲ್ಕಿ ಚಿತ್ರದ ಹಾಡು ಮೊದಲ ಸ್ಥಾನದಲ್ಲಿದೆ. ಎರಡನೆಯ ಸ್ಥಾನ ಪುಷ್ಪ ಎರಡು ಚಿತ್ರದ ಹಾಡು ಪಡೆದುಕೊಂಡಿದೆ. ಮೂರನೇ ಸ್ಥಾನ ಗೌರಿ ಚಿತ್ರದ ‘ಧೂಳ್ ಎಬ್ಬಿಸಾವ’ ಪಾಲಾಗಿದೆ.
___






Be the first to comment