ವಿಪ್ಲವ್ (ವಿಜಯ್ ದೇವರಕೊಂಡ) ಮತ್ತು ಆರಾಧ್ಯ (ಸಮಂತಾ) ಅವರಿಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ. ಆದರೆ, ಮನೆಯವರು ವಿರೋಧಿಸುತ್ತಾರೆ. ಅದನ್ನೂ ಮೀರಿ ಅವರಿಬ್ಬರು ಮದುವೆ ಆಗುತ್ತಾರೆ. ಬಳಿಕ ಇಬ್ಬರ ನಡುವೆ ಸಣ್ಣ ಸಣ್ಣ ವಿಷಯಗಳಿಗೆ ಮನಸ್ತಾಪ ಉಂಟಾಗಿ ಜಗಳವಾಗುತ್ತದೆ. ಇವೆಲ್ಲ ಎಲ್ಲೋ ಕೇಳಿದ ಕಥೆಯೋ ಅಥವಾ ಈಗಾಗಲೇ ನೋಡಿದ ಸಿನಿಮಾವೋ ಅನ್ನಿಸಬಹುದು ಅಲ್ಲವೇ? ಹೌದು, ಇಂತಹದೇ ಒಂದು ಸರಳ ಪ್ರೇಮ ಕಥೆ ‘ಖುಷಿ’.
ವಿಪ್ಲವ್ (ವಿಜಯ್ ದೇವರಕೊಂಡ) ಬಿಎಸ್‌ಎನ್‌ಎಲ್ ಕಂಪೆನಿಯ ಉದ್ಯೋಗಿ. ಮಣಿರತ್ನಂ ಫ್ಯಾಂಟಸಿಯಲ್ಲಿ ಬದುಕಲು ಇಷ್ಟಪಡುವ ವಿಪ್ಲವ್ ಕಾಶ್ಮೀರಕ್ಕೆ ಪೋಸ್ಟಿಂಗ್ ಮಾಡಿಸಿಕೊಳ್ತಾನೆ. ಆತನಿಗೆ ಆರಾಧ್ಯ (ಸಮಂತಾ) ಮೇಲೆ ಲವ್ ಆಗುತ್ತದೆ. ಆರಾಧ್ಯ ಪಾಕಿಸ್ತಾನದಿಂದ ಬೇಗಂ ರೀತಿ ವರ್ತಿಸುತ್ತಾಳೆ. ಇದೊಂದು ಎರಡು ದೇಶಗಳ ವ್ಯಕ್ತಿಗಳ ನಡುವಿನ ಲವ್ ಸ್ಟೋರಿ. ವಿಪ್ಲವ್ ಆರಾಧ್ಯಳನ್ನು ತನ್ನ ಪ್ರೀತಿಯಲ್ಲಿ ಬೀಳಿಸಿಕೊಳ್ತಾನೆ. ಮೊದಲ ಭಾಗದಲ್ಲಿ ಟಾಲಿವುಡ್‌ನಲ್ಲಿ ಕಾಣಸಿಗುವ ರೀತಿಯ ಲವ್ ಸ್ಟೋರಿ ಟ್ರ್ಯಾಕ್ ಇದಾಗಿದ್ದರೂ ಕೂಡ ಎರಡನೇ ಭಾಗದಲ್ಲಿ ಸಮಸ್ಯೆಗಳು ಶುರುವಾಗುತ್ತವೆ. ಹೀಗೆ ಕಥೆ ಸಾಗುವುದು. ವಿಪ್ಲವ್ ಹಾಗೂ ಆರಾಧ್ಯ ಬದುಕಿನಲ್ಲಿ ಏನಾಗುವುದು ಎಂಬುದೇ ಈ ಸಿನಿಮಾದ ಒನ್‌ಲೈನ್ ಸ್ಟೋರಿ.
ಶಿವ ನಿರ್ವಾಣ ನಿರ್ದೇಶನದ ಹಿಂದಿನ ಸಿನಿಮಾಗಳಾದ ‘ನಿನ್ನು ಕೋರಿ’, ‘ಮಜಿಲಿ’ ಸಿನಿಮಾಗಳಲ್ಲಿಯೂ ಪ್ರೇಮಕಥಾ ಹಂದರವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದನ್ನು ಗಮನಿಸಬಹುದು. ಎಲ್ಲದರಲ್ಲೂ ಒಂದೊಳ್ಳೆ ಫೀಲ್ ಅಡಗಿಸಿಡುವ ಪ್ರಯತ್ನ ಶಿವ ನಿರ್ಮಾಣ ಮಾಡಿದ್ದಾರೆ. ಅದೇ ಪ್ರಯತ್ನ ‘ಖುಷಿ’ ಚಿತ್ರದಲ್ಲೂ ಮುಂದುವರಿದಿದೆ.
ನಾಸ್ತಿಕ ಕುಟುಂಬದ ವಿಪ್ಲವ್ (ವಿಜಯ್), ದೇವರ ಆರಾಧಿಸುವ ಕುಟುಂಬದ ಆರಾಧ್ಯ (ಸಮಂತಾ) ನಡುವೆ ಪ್ರೀತಿ ಹುಟ್ಟುತ್ತದೆ. ಸಹಜವಾಗಿ ಇಬ್ಬರ ಮನೆಯಲ್ಲೂ ವಿರೋಧ ವ್ಯಕ್ತವಾಗುತ್ತದೆ. ಆದರೆ, ಮನೆಯವರ ಮಾತನ್ನು ವಿರೋಧಿಸಿ ಇಬ್ಬರೂ ಮದುವೆ ಆಗುತ್ತಾರೆ. ಆರಂಭದಲ್ಲಿ ಚೆನ್ನಾಗಿದ್ದು, ನಂತರ ಇಬ್ಬರ ನಡುವೆಯೂ ಮನಸ್ತಾಪ ಉಂಟಾಗುತ್ತದೆ. ಪ್ರೀತಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವಾಗ ವಿರೋಧಿಸಿದ ಪಾಲಕರೇ ಹೇಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎನ್ನುವುದೇ ಕಥೆ.
ಈ ಪ್ರೇಮ ಕಥೆಯ ಜತೆಗೆ ಪಾಲಕರ ವ್ಯಕ್ತಿತ್ವದ ಬದಲಾವಣೆ ಇದೆ. ಅದೆಷ್ಟೇ ಪ್ರೇಮ ಕಥೆಗಳ ಸಿನಿಮಾ ಬಂದರೂ ಏನಾದರೊಂದು ಮ್ಯಾಜಿಕ್ ಇದ್ದರೆ ಆ ಸಿನಿಮಾ ಗೆದ್ದುಬಿಡುತ್ತದೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ನಡುವಿನ ಕೆಮಿಸ್ಟ್ರಿ ಹೈಲೈಟ್. ಸುದೀರ್ಘ ಎನಿಸುವ ಸಿನಿಮಾ ವಿಜಯ್, ಸಮಂತಾ ಅಭಿನಯ, ವೆನ್ನೆಲ ಕಿಶೋರ್ ಹಾಗೂ ಅಲಿ ಹಾಸ್ಯದಿಂದ ನೋಡಿಸಿಕೊಳ್ಳುತ್ತದೆ. ಸಚಿನ್, ಮುರಳಿ, ರೋಹಿಣಿ, ಲಕ್ಷ್ಮೀ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ನೀಡಿದ್ದಾರೆ. ಸಮಂತಾ ಮುಖದಲ್ಲಿ ಮುಂಚೆ ಇದ್ದ ಮುಗ್ಧತೆ, ಹೊಳಪು ಮರೆಯಾದಂತೆ ಕಾಣುತ್ತದೆ. ಕೆಲವು ಸನ್ನಿವೇಶಗಳಲ್ಲಿ ಕತ್ತರಿ ಹಾಕಬಹುದಿತ್ತು. ಪ್ರೇಮ ಕಥೆಯನ್ನು ಇಚ್ಛಿಸುವವರು ನೋಡಬಹುದಾದ ಸಿನಿಮಾ.
ಸಂಗೀತ ನಿರ್ದೇಶಕ ಹೆಶಮ್ ಅಬ್ದುಲ್ ವಹಾಬ್ ಸಂಗೀತ ಇಂಪಾಗಿದೆ. ಈ ಹಿಂದೆ ಅವರು ಪಡೆದಿದ್ದ ‘ಹೃದಯಂ’ ಚಿತ್ರದ ಯಶಸ್ಸು ಬೈ ಚಾನ್ಸ್ ಅಲ್ಲ ಎಂಬುದನ್ನು ‘ಖುಷಿ’ ಸಿನಿಮಾದ ಸಂಗೀತ ನಿರ್ದೇಶನದಿಂದ ಅವರು ಸಾಬೀತುಪಡಿಸಿದ್ದಾರೆ.
Be the first to comment