ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾದ ಶೀರ್ಷಿಕೆ ಬದಲಾಗಿದ್ದು ‘ಮಾತೃಭೂಮಿ’ ಎಂಬ ಹೊಸ ಹೆಸರನ್ನು ಘೋಷಿಸಲಾಗಿದೆ.
ಸಲ್ಮಾನ್ ಖಾನ್ ಮಾರ್ಚ್ 16ರಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್ ರಕ್ತಸಿಕ್ತ ಮುಖದೊಂದಿಗೆ ಮುಳ್ಳುತಂತಿಗಳಿಂದ ಸುತ್ತಲ್ಪಟ್ಟ ಕಂಬವೊಂದನ್ನು ತಡೆಯುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. “ಯುದ್ಧಕ್ಕೆ ಶಾಂತಿ ಸಿಗಲಿ” ಎಂಬ ಕ್ಯಾಪ್ಶನ್ ನೀಡಿ ಸಲ್ಮಾನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.
ಮೊದಲು ಸಿನಿಮಾ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಆದರೆ ಹೊಸ ಪೋಸ್ಟರ್‌ನಲ್ಲಿ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ.
“ಇದು ದಿಢೀರ್ ನಿರ್ಧಾರವಲ್ಲ. ಆರಂಭದಲ್ಲೇ ‘ಬ್ಯಾಟಲ್ ಆಫ್ ಗಲ್ವಾನ್’ ಮತ್ತು ‘ಮಾತೃಭೂಮಿ’ ಎಂಬ ಎರಡು ಶೀರ್ಷಿಕೆಗಳನ್ನು ನೋಂದಾಯಿಸಿದ್ದೆವು. ಚಿತ್ರ ಕೇವಲ ಯುದ್ಧದ ಕಥೆಯಲ್ಲ. ಮಾನವೀಯತೆ, ಸಹಾನುಭೂತಿ ಮತ್ತು ಸೈನಿಕರ ಹೋರಾಟದ ಕಥೆಯಾಗಿರುವುದರಿಂದ ‘ಮಾತೃಭೂಮಿ’ ಎಂಬ ಹೆಸರು ಹೆಚ್ಚು ಸೂಕ್ತವೆನಿಸಿತು” ಎಂದು ಶೀರ್ಷಿಕೆ ಬದಲಾವಣೆಯ ಕುರಿತು ನಿರ್ದೇಶಕ ಅಪೂರ್ವ ಲಖಿಯಾ ತಿಳಿಸಿದ್ದಾರೆ.
ಸಿನಿಮಾದ ಕಥೆ ಗಲ್ವಾನ್ ಕಣಿವೆನಲ್ಲಿ ನಡೆದ ಗಲ್ವಾನ್ ಕಣಿವೆ ಸಂಘರ್ಷ 2020 ಹಿನ್ನೆಲೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
—-





Be the first to comment