ಬಾಲಿವುಡ್‌ನ ಜನಪ್ರಿಯ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆ ನಿರ್ಧಾರಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.
2014ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಲ್ಮಾನ್ ಕಿಚಾಯಿಸಿದಾಗ, ಅರಿಜಿತ್ ತಮಾಷೆಯಾಗಿ ನೀಡಿದ ಪ್ರತಿಕ್ರಿಯೆ ಸಲ್ಮಾನ್‌ಗೆ ಇಷ್ಟವಾಗಿರಲಿಲ್ಲ ಎನ್ನಲಾಗಿದೆ. ಆ ನಂತರ ಅರಿಜಿತ್ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಾ ಬಂದವು ಎಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಹರಡಿವೆ.
ಆ ನಂತರ ಅರಿಜಿತ್ ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಅವರಿಗೆ ಬಹಿರಂಗ ಕ್ಷಮಾಪಣಾ ಪತ್ರ ಬರೆದು, “ನನ್ನ ಮಾತುಗಳಿಂದ ನಿಮಗೆ ನೋವಾಗಿದ್ದರೆ ಕ್ಷಮೆ ಇರಲಿ” ಎಂದು ಮನವಿ ಮಾಡಿದ್ದರು. ನಂತರ ಇಬ್ಬರ ನಡುವೆ ಪ್ಯಾಚ್ ಅಪ್ ಆಗಿದ್ದರೂ, ಅವಕಾಶಗಳು ಪೂರ್ಣ ಪ್ರಮಾಣದಲ್ಲಿ ಮರಳಿ ಬಂದಿಲ್ಲ ಎನ್ನಲಾಗುತ್ತಿದೆ.
2020ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು ಕೇಳಿ ಬಂದಿತ್ತು. ನಟ ವಿವೇಕ್ ಓಬೆರಾಯ್, ನಿರ್ದೇಶಕ ಅನುರಾಗ್ ಕಶ್ಯಪ್, ಅಭಿನವ್ ಕಶ್ಯಪ್, ದಿವಂಗತ ನಟಿ ಜಿಯಾ ಖಾನ್ ತಾಯಿ ಸೇರಿದಂತೆ ಹಲವರು ಸಲ್ಮಾನ್ ಖಾನ್ ತಮ್ಮ ಪ್ರಭಾವದಿಂದ ತಮ್ಮ ವೃತ್ತಿಜೀವನ ಹಾಳುಮಾಡಿದ್ದಾರೆ ಎಂದು ಆರೋಪಿಸಿದ್ದರು.
‘ಆಶಿಕಿ 2’, ‘ಟೈಗರ್ 3’ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಅರಿಜಿತ್ ಧ್ವನಿ ನೀಡಿದ್ದಾರೆ., ಪುನೀತ್ ರಾಜ್ ಕುಮಾರ್ ಅಭಿನಯದ ಕನ್ನಡದ ‘ನಿನ್ನಿಂದಲೇ’ ಚಿತ್ರದ ‘ಬದಲಾಯಿತೇನು ಕಣ್ಣ ಹೊಳಪು…’ ಹಾಡಿನ ಮೂಲಕ ಜನಪ್ರಿಯತೆ ಪಡೆದಿದ್ದಾರೆ.





Be the first to comment