ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ನಿರಂತರವಾಗಿ ಜೀವ ಬೆದರಿಕೆಗಳಿಂದಾಗಿ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ದುಬೈಗೆ ಹಾರಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜಕಾರಣಿ ಬಾಬಾ ಸಿದ್ದಿಕಿ ಸಾವಿನ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ವಹಿಸಿಕೊಂಡಿದ್ದು, ಸಲ್ಮಾನ್ ಖಾನ್ನ್ನು ಕೊಲ್ಲುವುದಾಗಿ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕಿದೆ. ಪ್ರಾಣ ಬೆದರಿಕೆ ಹಾಗೂ ಕೊಲೆ ಬೆದರಿಕೆಯ ನಡುವೆ ಸಲ್ಮಾನ್ ಖಾನ್ ಶೂಟಿಂಗ್ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಸಿಕಂದರ್ ಸಿನಿಮಾದ ಶೂಟಿಂಗ್ ಮುಂದುವರೆದಿದೆ. ನಟ ದುಬೈಗೆ ತೆರಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ವರದಿಯ ಪ್ರಕಾರ, ಸಲ್ಮಾನ್ ಖಾನ್ ಶೀಘ್ರದಲ್ಲೇ ದಬಾಂಗ್ ರಿಲೋಡೆಡ್ ಕಾರ್ಯಕ್ರಮಕ್ಕಾಗಿ ದುಬೈಗೆ ಹೋಗಲಿದ್ದಾರೆ. ಸಲ್ಮಾನ್ಡಿ ಸೆಂಬರ್ 7 ರಂದು ಜನಪ್ರಿಯ ಅಂತರಾಷ್ಟ್ರೀಯ ಶೋ ದಬಾಂಗ್ ರಿಲೋಡೆಡ್ ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ. ಸಲ್ಮಾನ್ ಜೊತೆಗೆ ಜಾಕ್ವೆಲಿನ್ ಫರ್ನಾಂಡಿಸ್, ಸೋನಾಕ್ಷಿ ಸಿನ್ಹಾ, ಸುನಿಲ್ ಗ್ರೋವರ್, ಮನೀಶ್ ಪಾಲ್ ಮತ್ತು ಆಸ್ತಾ ಗಿಲ್ ಆಗಮಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮವನ್ನು ಜೋರ್ಡಿ ಪಟೇಲ್ ಆಯೋಜಿಸಿದ್ದಾರೆ.
ಸಲ್ಮಾನ್ ಖಾನ್ ಗೆ ಬೆದರಿಕೆ ಬಂದ ನಂತರ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ವೈ+ ಭದ್ರತೆ ನೀಡಲಾಗಿದೆ. ನಟನ ಜೊತೆಗೆ 11 ಪೊಲೀಸ್ ಪಡೆಗಳು ಜಾಗೃತವಾಗಿರುತ್ತವೆ. ಇವರಲ್ಲಿ 2ರಿಂದ 4 ಮಂದಿ ಕಮಾಂಡೋಗಳೂ ಇದ್ದಾರೆ. ಸಲ್ಮಾನ್ ಬಿಗ್ ಬಾಸ್ 18 ರ ಚಿತ್ರೀಕರಣವನ್ನು ಭಾರೀ ಪೊಲೀಸ್ ಪಡೆ ಮತ್ತು ಭದ್ರತಾ ಸಿಬ್ಬಂದಿಗಳ ಮೇಲ್ವಿಚಾರಣೆಯಲ್ಲಿ ನಡೆಸುತ್ತಿದ್ದಾರೆ.
Be the first to comment