ರಿಲೀಸ್ ಆಯ್ತು ‘ಸಲಾಂ ಸೋಲ್ಜರ್’ ಸಾಂಗ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ ‘ಜೇಮ್ಸ್’ ನ ಎರಡನೇ ಸಾಂಗ್ ‘ಸಲಾಂ ಸೋಲ್ಜರ್’ ಕಿಚ್ಚ ಸುದೀಪ್ ಬಿಡುಗಡೆಮಾಡಿದರು.

ಈ ಹಾಡಿನಲ್ಲಿ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ರನ್ನು ಸೋಲ್ಜರ್ ಗೆಟಪ್‌ನಲ್ಲಿ ಕಣ್ತುಂಬಿಕೊಳ್ಳಬಹುದು. ಇದೇ ಮೊದಲ ಬಾರಿಗೆ ಅಪ್ಪು ಯೋಧನಾಗಿ ಕಾಣಿಸಿಕೊಳ್ಳುತ್ತಿದ್ದು, ಸಿನಿಪ್ರಿಯರು ಅಪ್ಪು ಗೆಟಪ್ ಇಷ್ಟ ಪಡುತ್ತಿದ್ದಾರೆ.
‘ರಣ ರಣ ರಣಕಲಿಯೋ.. ಯುದ್ಧ ಭುಮಿಗೇನೇ ಇವ ಕಲಿಯೋ.. ಇಡೀ ದೇಶವೇ ನಿನ್ನ ಮನೆಯೋ.. ಧಡ ಧಡ ಧಡ ನಡೆಯೋ.. ನಿನ್ನ ತ್ಯಾಗಕ್ಕೆಂದು ನಾನು ಋಣಿಯೋ.. ಸಲಾಂ ಸೋಲ್ಜರ್.. ನೀ ದೇಶಕೆನೇ ಪವರ್’ ಎಂಬ ಸಾಹಿತ್ಯವಿರುವ ಹಾಡಿನಲ್ಲಿ ಪುನೀತ್ ರಾಜ್‌ಕುಮಾರ್ ಸೈನಿಕನಾಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಮೇಕಿಂಗ್ ದೃಶ್ಯಗಳನ್ನು ರಿಲೀಸ್ ಮಾಡಲಾಗಿದೆ. ಇಲ್ಲಿ ಪುನೀತ್ ರಾಜ್‌ಕುಮಾರ್ ಸ್ಟಂಟ್ಸ್ ಕೂಡ ನೋಡಬಹುದು. ಕಾಶ್ಮೀರದ ಸುಂದರತಾಣಗಳಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ.

ಸಲಾಂ ಸೋಲ್ಜರ್ ಚಿತ್ರದ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಸಂಜಿತ್ ಹೆಗ್ಡೆ, ಚರಣ್ ರಾಜ್ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಪೂರ್ತಿ ಹಾಡಿನಲ್ಲಿ ಪವರ್‌ಸ್ಟಾರ್ ನ್ನು ಸೋಲ್ಜರ್ ಆಗಿ ನೋಡಬಹುದು.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾದ ಟಿಕೆಟ್‌ಗಳನ್ನು ಒಂದು ವಾರ ಮುನ್ನವೇ ಆಯ್ದ ಥಿಯೇಟರ್‌ಗಳಲ್ಲಿ ಬುಕ್ ಮಾಡಬಹುದಾಗಿದೆ.

ಬೆಂಗಳೂರಿನಲ್ಲಿರುವ 5 ಗೋಪಾಲ್ ಮಾಲ್‌ಗಳಲ್ಲಿ ‘ಜೇಮ್ಸ್’ ಸಿನಿಮಾ ವೀಕ್ಷಿಸಲಿ ಆನ್‌ಲೈನ್ ಬುಕ್ಕಿಂಗ್ ಆರಂಭ ಆಗಿದೆ. ಮೈಸೂರು ರಸ್ತೆಯ ಗೋಪಾಲನ್ ಆರ್ಕೇಡ್‌, ಬನ್ನೇರುಘಟ್ಟದ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಾಲ್, ಸಿರ್ಸಿ ಸರ್ಕಲ್‌ನಲ್ಲಿರುವ ಗೋಪಾಲನ್ ಮಾಲ್, ಓಲ್ಡ್ ಮದ್ರಾಸ್ ರಸ್ತೆಯ ಗೋಪಾಲನ್ ಮಿನಿಪ್ಲೆಕ್ಸ್‌ನಲ್ಲಿ ‘ಜೇಮ್ಸ್’ ಚಿತ್ರದ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಆಗುತ್ತಿವೆ. ಮಾರ್ಚ್ 17 ರ ಗುರುವಾರ ಸಿನಿಮಾ ರಿಲೀಸ್ ಆಗಲಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!