ದುನಿಯಾ ವಿಜಯ್ ಅಭಿನಯದ ಸಲಗ ಸಿನಿಮಾದ “ಹೆಜ್ಜೆ ಹೆಜ್ಜೆಗೂ ಹೊಂಚಾಕುತ್ತೈತೆ” ಹಾಡು ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಆಗಿದೆ.
ಈ ಬಗ್ಗೆ ದುನಿಯಾ ವಿಜಯ್ ಅವರು ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದಾರೆ. “ನವೀನ್ ಸಜ್ಜು ಸಂಗೀತ ಮತ್ತು ಗಾಯನದ “ಹೆಜ್ಜೆ ಹೆಜ್ಜೆಗೂ ಹೊಂಚಾಕುತ್ತೈತೆ”ಹಾಡು ಅಭಿಮಾನಿಗಳ ಒತ್ತಾಯದ ಮೇರೆಗೆ ಬಿಡುಗಡೆಯಾಗಿದೆ ನೋಡಿ ಕೇಳಿ ಆನಂದಿಸಿ” ಎಂದು ಅವರು ಹೇಳಿದ್ದಾರೆ.
“ಹೆಜ್ಜೆ ಹೆಜ್ಜೆಗೂ ಹೊಂಚಾಕುತ್ತೈತೆ”ಹಾಡು ಬಿಡುಗಡೆ ಆದ 12 ಗಂಟೆಯ ಒಳಗೆ 1.8 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆಯುವಲ್ಲಿ ಯಶಸ್ವಿಯಾಗಿದೆ. 12 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮುದ್ರೆ ಒತ್ತಿ ಸಂತಸ ವ್ಯಕ್ತಪಡಿಸಿದ್ದಾರೆ. ನವೀನ್ ಸಜ್ಜು ಹಾಡಿಗೆ ಜೀವ ತುಂಬಿ ಹಾಡಿದ್ದು ಕೇಳುಗರಿಗೆ ಹಾಡು ಜೀವನದ ದಾರ್ಶನಿಕ ಅನುಭವ ನೀಡುವಂತಿದೆ.
ಸಲಗ ಚಿತ್ರ 2021ರಲ್ಲಿ ಬಿಡುಗಡೆ ಆದ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಮೊದಲ ಬಾರಿಗೆ ದುನಿಯಾ ವಿಜಯ್ ಅವರು ಚಿತ್ರ ನಿರ್ದೇಶಿಸುವ ಮೂಲಕ ಯಶಸ್ಸನ್ನು ಕಂಡರು. ಈ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆಗೆ ಧನಂಜಯ್, ಸಂಜನಾ ಆನಂದ್ ನಟಿಸಿದ್ದಾರೆ.
ಕೆ ಪಿ ಶ್ರೀಕಾಂತ್ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಯಶಸ್ಸಿನ ಬಳಿಕ ದುನಿಯಾ ವಿಜಯ್ ತೆಲುಗು ಚಿತ್ರದಲ್ಲಿ ನಟಿಸಲು ಅವಕಾಶ ಪಡೆದಿದ್ದಾರೆ.
___

Be the first to comment