‘ಸಖತ್’ ಪ್ರೀ-ರಿಲೀಸ್ ಈವೆಂಟ್: ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂದಿ!

ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಸಖತ್ ನ.26ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಿಕ್ಕೆ ರೆಡಿಯಾಗಿದ್ದು, ಪ್ರೀ-ರಿಲೀಸ್ ಈವೆಂಟ್ ನಲ್ಲಿ ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂದಿ ನೋಡುಗರ ಗಮನ ಸೆಳೆಯಿತು.

ಚಿತ್ರದ ಫಸ್ಟ್ ಲುಕ್, ಟೀಸರ್ ಹಾಗೂ ಸಾಂಗ್ಸ್ ಮೂಲಕ ಕುತೂಹಲದ ಚಿಟ್ಟೆಯಾಗಿರುವ ಸಖತ್ ಸಿನಿಮಾ ತಂಡ, ಅದ್ಧೂರಿಯಾಗಿ ನಿನ್ನೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಸಿಂಪಲ್ ಸುನಿ, ನಾಯಕಿಯರಾದ ನಿಶ್ವಿಕಾ ನಾಯ್ಡು, ಸುರಭಿ, ನಿರ್ಮಾಪಕರಾದ ಸುಪ್ರಿತ್-ನಿಶಾ, ಹಿರಿಯ ಕಲಾವಿದರ ರಂಗಾಯಣ ರಘು ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಕಲಾವಿದರು ಸಖತ್ ಪ್ರೀ-ರಿಲೀಸ್ ಇವೆಂಟ್ ಗೆ ಸಾಕ್ಷಿಯಾದರು.

ನಿರ್ದೇಶಕ ಕಂ ನಟ ಜೋಗಿ ಪ್ರೇಮ್, ಬೈ ಟು ಲವ್ ಬ್ಯೂಟಿ ಶ್ರೀಲೀಲಾ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಖತ್ ಸಿನಿಮಾಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಗಣೇಶ್, ಪ್ರೇಮ್ ಒಟ್ಟಿಗೆ ವೇದಿಕೆ ಏರಿದರು. ಈ ವೇಳೆ ಗಣೇಶ್ ಅವರು ಪ್ರೇಮ್ ಗೆ ಒಂದು ಮನವಿ ಮಾಡಿಕೊಂಡರು. ‘ಎಕ್ಸ್ ಕ್ಯೂಸ್ ಮೀ’ ಸಿನಿಮಾದ “ಬ್ರಹ್ಮ ವಿಷ್ಣು” ಹಾಡು ಹೇಳುವಂತೆ ಕೋರಿಕೊಂಡರು. ಅದಕ್ಕೆ ಅಕ್ಕರೆಯಿಂದ ಪ್ರತಿಕ್ರಿಯಿಸಿದ ಪ್ರೇಮ್ ಹಾಡು ಹೇಳಿದರು. ಈ ವೇಳೆ ಗಣೇಶ್ ಕೂಡ ಧನಿಗೂಡಿಸಿ “ಬ್ರಹ್ಮ ವಿಷ್ಣು” ಹಾಡು ಹೇಳಿದರು.

ಈ ಮೊದಲು ಮಾತಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಅಪ್ಪುಗೆ ನಮನ ಸಲ್ಲಿಸಿದರು. “ಪವರ್ ಸ್ಟಾರ್ ಕನ್ನಡ ಚಿತ್ರರಂಗ ಇರುವವರೆಗೂ ನಂಬರ್-1 ಸ್ಟಾರ್ ” ಅಂತ ಮನದ ಮಾತು ಬಿಚ್ಚಿಟ್ಟರು. ಬಳಿಕ ತಮ್ಮ ಚಂದದ ಮಾತಿನ ಮೂಲಕ ಎಲ್ಲರನ್ನೂ ನಕ್ಕು ನಲಿಸಿದ ಗಣೇಶ್,” ಸಖತ್ ಸಿನಿಮಾ ಎಲ್ಲರೂ ನೋಡಿ” ಎಂದು ಮನವಿ ಮಾಡಿದರು.

ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು, ನಿರ್ದೇಶಕ ಸಿಂಪಲ್ ಸುನಿ, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಸ್ಯನಟ ಧರ್ಮಣ್ಣ ಕಡೂರು, ರಂಗಾಯಣ ರಘು ಸಖತ್ ಸಿನಿಮಾದ ತಮ್ಮ ಜರ್ನಿ ಬಗ್ಗೆ ಅನುಭವ ಹಂಚಿಕೊಂಡರು.

ಟಿವಿ ರಿಯಾಲಿಟಿ ಶೋ ಸುತ್ತ ಎಣೆದಿರೋ ಸಖತ್ ಸಿನಿಮಾಕ್ಕೆ ಸುಪ್ರಿತ್ ಹಾಗೂ ನಿಶಾ ಬಂಡವಾಳ ಹೂಡಿದ್ದು, ಈಗಾಗಲೇ ಸೆನ್ಸಾರ್ ಮುಗಿದಿದೆ. ಸಖತ್ ಸಿನಿಮಾ ನ. 26ಕ್ಕೆ ಥಿಯೇಟರ್ ಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!