ಕತಾರ್ನಲ್ಲಿ ಎರಡನೆಯ ಮನೆ ಖರೀದಿಸಿದ್ದೇನೆ. ಅಲ್ಲಿಯೇ ಸೇಫ್ ಎನ್ನಿಸುತ್ತದೆ ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಹೇಳಿದ್ದಾರೆ.
ಮುಂಬೈನಲ್ಲಿ ಇರುವ ಅವರ ಮನೆಯ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಕಾಶ್ಮೀರದ ಘಟನೆಯ ಬಳಿಕ ಈ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಸೈಫ್ ಅಲಿ ಖಾನ್ ಈ ಮಾತು ನೆಟ್ಟಿಗರನ್ನು ಕೆರಳಿಸಿದೆ.
ಸರಿಯಾಗಿ ನಿರ್ಧಾರ ಮಾಡಿರುವೆ, ಭಾರತ ಬಿಟ್ಟು ತೊಲಗು, ಬೇಕಿದ್ರೆ ಪಾಕಿಸ್ತಾನಕ್ಕೆ ಹೋಗು ಎನ್ನುತ್ತಿದ್ದಾರೆ ನೆಟ್ಟಿಗರು. ಭಾರತದ ಸಿನಿಮಾಗಳಲ್ಲಿ ಯಾಕೆ ನಟಿಸ್ತಾ ಇರುವೆ? ಇಲ್ಲಿಯ ಅನ್ನ ಉಂಡು, ಇಲ್ಲಿ ಉಸಿರಾಡಿ ಕತಾರ್ ಸೇಫ್ ಎನ್ನಿಸಿದ್ರೆ, ಮತ್ಯಾಕೆ ಇಲ್ಲಿ ಇನ್ನೂ ಇದ್ಯಾ ಎಂದು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಆದಷ್ಟು ಬೇಗ ನಿನ್ನ ತವರಿಗೆ ಹೋಗು ಎಂದು ಹೇಳುತ್ತಿದ್ದಾರೆ.
ಕಳೆದ ಜನವರಿ 15ರಂದು ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಚೂರಿ ಇರಿತದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿಸಿಟಿವಿ ಫುಟೇಜ್ನಲ್ಲಿ ಆರೋಪಿಯ ಮುಖ ಚೆನ್ನಾಗಿ ಕಾಣಿಸುತ್ತಿದ್ದರೂ, ಪೊಲೀಸರು ನಿಜವಾದ ಆರೋಪಿಯನ್ನು ಹಿಡಿಯುವ ಬದಲು ಅಮಾಯಕರ ಜೀವ ಹಿಂಡುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಪೊಲೀಸರು ಛತ್ತೀಸ್ಗಢದ ಆಕಾಶ್ ಕೈಲಾಶ್ ಕನೋಜಿಯಾ ಅನ್ನೋ ಯುವಕನನ್ನು ಅರೆಸ್ಟ್ ಮಾಡಿ ಜೀವನವನ್ನೇ ನರಕದಲ್ಲಿ ತಳ್ಳಿದ್ದಾರೆ . ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಪೊಲಿಸರು ಅರೆಸ್ಟ್ ಮಾಡಿ ಯುವಕನ ಮದುವೆ ಕ್ಯಾನ್ಸಲ್ ಆಗಿದೆ. ಉದ್ಯೋಗವೂ ಹೋಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ನಿಜವಾಗಿಯೂ ಸೈಫ್ ಮೇಲೆ ದಾಳಿ ಆಗಿದ್ದೇ ಸುಳ್ಳಾ ಎನ್ನುವ ಮಟ್ಟಿಗೆ ಸುದ್ದಿಯಾಗುತ್ತಿದೆ. ಸೈಫ್ ಅಲಿ -ಕರೀನಾ ಕಪೂರ್ ಅವರ ಜೋಡಿ ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ .
—

Be the first to comment