Saif Ali Khan

Saif Ali Khan: ಚಾಕು ಇರಿತ ಪ್ರಕರಣ: ಆರೋಪಿ ಅರೆಸ್ಟ್

ಸೈಫ್ ಅಲಿ ಖಾನ್​ ಚಾಕು ಇರಿತ ಪ್ರಕರಣ  ಸಂಬಂಧ  ಮನೆಗೆ ನುಗ್ಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಕಳ್ಳ  ಬಂಧನಕ್ಕೆ ಒಳಗಾಗಿದ್ದಾನೆ.

ಘಟನೆ ನಡೆದ ಸುಮಾರು 30 ಗಂಟೆಗಳ ಬಳಿಕ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸೈಫ್ ಅಲಿ ಖಾನ್ ಅವರು ಹಲ್ಲೆಗೆ ಒಳಗಾಗಿ  ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ  ಚೇತರಿಸಿಕೊಳ್ಳುತ್ತಿದ್ದಾರೆ. ಆಪರೇಷನ್ ಬಳಿಕ ಸೈಫ್ ಅಲಿ ಖಾನ್  ಪ್ರತಿಕ್ರಿಯಿಸಿದ್ದು, ನಾನು ಕ್ಷೇಮವಾಗಿದ್ದೇನೆ ಎಂದಿದ್ದಾರೆ.

ಗುರುವಾರ ನಸುಕಿನ ಜಾವ 2.30ರ ವೇಳೆಗೆ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ಕಳ್ಳ  ಸೈಫ್ ಮೇಲೆ 6 ಬಾರಿ ಚಾಕು ಇರಿತ ನಡೆಸಿದ್ದ. ಫೈರ್​ ಎಕ್ಸಿಟ್ ಬಳಸಿಕೊಂಡು ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ ಕಳ್ಳ ಮೊದಲು ಸೈಫ್ ಅಲಿ ಖಾನ್ ಪುತ್ರ ಜೇಹ್ ಅಲಿ ಖಾನ್ ಮಲಗಿದ್ದ ಕೋಣೆಗೆ ಹೋಗಿ ಅಲ್ಲಿದ್ದ ನರ್ಸ್ ಬಳಿ 1 ಕೋಟಿ ಕೊಡುವಂತೆ ಡಿಮ್ಯಾಂಡ್ ಮಾಡಿದ್ದ. ಆದರೆ  ಹಣ ನೀಡಲು ನರ್ಸ್ ಹಿಂದೇಟು ಹಾಕಿದಾಗ ಆಕೆಯ ಮೇಲೆ ಕಳ್ಳ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ನರ್ಸ್ ಗೂ  ಗಾಯಗಳಾಗಿವೆ.

ಜೇಹ್ ಅಲಿ ಖಾನ್ ಮಲಗಿದ್ದ ಕೋಣೆಗೆ ನುಗ್ಗಿದ್ದ ಕಳ್ಳ ದಾಂದಲೆ ಮಾಡಿದಾಗ  ಮನೆಯಲ್ಲಿ ಇದ್ದವರಿಗೆ ಎಚ್ಚರ ಆಗಿದೆ. ಈ ವೇಳೆ ಸೈಫ್ ಅಲಿ ಖಾನ್ ಕಳ್ಳನನ್ನು ಹಿಡಿಯಲು ಮುಂದಾಗಿದ್ದು ಆ ಸಂದರ್ಭದಲ್ಲಿ ಕಳ್ಳ ಸೈಫ್ ಮೇಲೆ ದಾಳಿ ಮಾಡಿದ್ದಾನೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!