‘ಪುಷ್ಪ 2 ‘ಸಾಯಿ ಪಲ್ಲವಿ ನಟಿಸಲ್ಲ

ತೆಲುಗು ಸ್ಟಾರ್ ನಟಿ ಸಾಯಿ ಪಲ್ಲವಿ ಪುಷ್ಪ 2′ ಸಿನಿಮಾದಲ್ಲಿ ಅವರಿಗೆ ಬುಡಕಟ್ಟು ಜನಾಂಗದ ಹುಡುಗಿಯ ಪಾತ್ರ ನೀಡುತ್ತಿಲ್ಲ ಎಂದು ಚಿತ್ರತಂಡ ತಿಳಿಸಿದೆ.

ನಿರ್ಮಾಪಕ ವೈ. ರವಿಶಂಕರ್ ಈ ಬಗ್ಗೆ ಮಾತನಾಡಿದ್ದು, ‘ ಸಾಯಿ ಪಲ್ಲವಿ ನಟಿಸುತ್ತಿರುವ ಸುದ್ದಿ ನಿಜವಲ್ಲ’ ಎಂದು ಹೇಳಿದ್ದಾರೆ.

‘ಪುಷ್ಪ 2’ ಚಿತ್ರಕ್ಕೆ ಸುಕುಮಾರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಪ್ರತಿಷ್ಠಿತ ಮೈತ್ರಿ ಮೂವೀ ಮೇಕರ್ಸ್​ ಸಂಸ್ಥೆ ಮೂಲಕ ಈ ಸಿನಿಮಾ ಮೂಡಿಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್​ 22ರಂದು ಈ ಚಿತ್ರದ ಶೂಟಿಂಗ್​ ಆರಂಭ ಆಗಲಿದೆ.

ರಶ್ಮಿಕಾ ಮಂದಣ್ಣ ಹಾಗೂ ಅಲ್ಲು ಅರ್ಜುನ್​ ಅವರು ಜೊತೆಯಾಗಿ ಕ್ಯಾಮೆರಾ ಎದುರಿಸಲಿದ್ದಾರೆ. ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಹಾಗೂ ಇನ್ನಿತರ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ.

‘ಪುಷ್ಪ 2’ ಬಗ್ಗೆ ಅನೇಕ ಗಾಸಿಪ್​ಗಳು ಹರಿದಾಡುತ್ತಿವೆ. ಕಥಾನಾಯಕ ಲುಕ್​ ಬದಲಾಗುತ್ತದೆ. ಶ್ರೀವಲ್ಲಿ ಪಾತ್ರ ಸತ್ತು ಹೋಗುತ್ತದೆ. ಪುಷ್ಪರಾಜ್​ ವಿದೇಶಕ್ಕೆ ಹೋಗ್ತಾನಂತೆ.. ಹೀಗೆ ಹತ್ತು ಹಲವು ಅಂತೆ-ಕಂತೆಗಳು ಕೇಳಿಬರುತ್ತಿವೆ. ಈ ನಡುವೆ ಸಾಯಿ ಪಲ್ಲವಿ ಕೂಡ ‘ಪುಷ್ಪ 2’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡಿತ್ತು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!