ಸಿನಿಮಾ ಕಾರ್ಮಿಕರಿಗೆ ನೆರವಾದ ಸಾಯಿಕುಮಾರ್ ಸಹೋದರರು

ಕೊರೋನ ಹಾವಳಿಯಿಂದ ಚಿತ್ರೀಕರಣ ಸ್ಥಗಿತವಾಗಿ ಎರಡು ತಿಂಗಳು ಕಳೆದಿದೆ. ಸಿನಿ ಕಾರ್ಮಿಕರ ಕಷ್ಟ ಹೇಳತೀರಲಾಗಿದೆ. ಈ ಸಮಯದಲ್ಲಿ ಅವರಿಗೆ ನೆರವಾಗುವ ಉತ್ತಮ ಗುಣ ತೋರಿದ್ದಾರೆ ನಟ ಸಾಯಿಕುಮಾರ್ ಸಹೋದರರು.

ನಟರಾದ ಸಾಯಿಕುಮಾರ್, ರವಿಶಂಕರ್ ಹಾಗೂ ನಿರ್ದೇಶಕ ಅಯ್ಯಪ್ಪ ಪಿ ಶರ್ಮ ಮೂವರು ಸಹೋದರರು ಸೇರಿ ಸುಮಾರು ಐದು ಲಕ್ಷದ ನಾಲ್ಕು ರೂಪಾಯಿಗಳನ್ನು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನೀಡಿದ್ದಾರೆ.

ನಾವು ಬೇರೆ ರಾಜ್ಯದಲ್ಲಿ ಜನಿಸಿದ್ದರೂ, ನಮ್ಮ ಜನಪ್ರಿಯತೆಯ ಹೆಚ್ಚು ಪಾಲು ಕರ್ನಾಟಕದು. ಹಾಗಾಗಿ ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎನ್ನುತ್ತಾರೆ ಸಾಯಿಕುಮಾರ್ ಸಹೋದರರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!