ಕನ್ನಡದಲ್ಲಿ ಮೊದಲ ಬಾರಿಗೆ ಮಹಿಳಾ ಕ್ರಿಕೆಟರ್ ಬದುಕಿನ ಕುರಿತ ಚಿತ್ರವಾಗಿ ಈ ವಾರ ತೆರೆಯ ಮೇಲೆ ಸಹಾರಾ ಚಿತ್ರ ಬಂದಿದೆ.
ಮಂಡ್ಯದ ಗ್ರಾಮೀಣ ಪ್ರದೇಶದ ಯುವತಿಯೊಬ್ಬಳು ಕ್ರಿಕೆಟರ್ ಆಗುವ ಕನಸಿನಲ್ಲಿ ಯಶಸ್ಸು ಕಾಣುತ್ತಾಳೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಚಿತ್ರದಲ್ಲಿ ಮಂಡ್ಯದ ಯುವತಿಯ ಪಾತ್ರ ಜಯಶ್ರೀ ಆಗಿ ಸಾರಿಕಾ ರಾವ್ ಕಾಣಿಸಿಕೊಂಡಿದ್ದಾರೆ. ಇದು ಇವರಿಗೆ ಚೊಚ್ಚಲ ಚಿತ್ರ. ರಣಜಿ ಆಟಗಾರ ಪವನ್ ಅವರಿಂದ ತರಬೇತಿ ಪಡೆದಿರುವ ಸಾರಿಕಾ ರಾವ್ ಕ್ರಿಕೆಟರ್ ಆಗಿ ತೆರೆಯ ಮೇಲೆ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನವನ್ನು ಮಾಡಿದ್ದಾರೆ. ಜಯಶ್ರೀ ತಂದೆ ಕ್ರಿಕೆಟ್ ಪ್ರೇಮಿ ಆಗಿದ್ದು ತಮಗೆ ಗಂಡು ಮಕ್ಕಳಿಲ್ಲದ ಬಗ್ಗೆ ಬೇಸರ ಹೊಂದಿರುತ್ತಾರೆ. ಅವರಿಗೆ ಜಯಶ್ರೀ ಬಗ್ಗೆ ಅಸಡ್ಡೆ ಇರುತ್ತದೆ. ಮನೆ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವ ಜಯಶ್ರೀ ತನ್ನ ಕುಟುಂಬಕ್ಕೆ ಸಹಾಯ ಮಾಡುವ ಜೊತೆಗೆ ಕ್ರಿಕೆಟ್ ನಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಾಳೆ. ಮುಂದೆ ಅವಳು ಯಶಸ್ವಿ ಕ್ರಿಕೆಟರ್ ಆಗುತ್ತಾಳೆಯೇ ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಸಾರಿಕಾ ರಾವ್ ಸಾಕಷ್ಟು ಶ್ರಮಪಟ್ಟು ತಮ್ಮ ಪಾತ್ರವನ್ನು ಮಾಡಿದ್ದಾರೆ. ಕ್ರಿಕೆಟರ್ ಹಾಗೂ ಗ್ರಾಮೀಣ ಹುಡುಗಿಯಾಗಿ ಅವರು ತಮ್ಮ ಅಭಿನಯಕ್ಕೆ ಫುಲ್ ಮಾರ್ಕ್ಸ್ ಪಡೆದುಕೊಳ್ಳುತ್ತಾರೆ. ಕಿಚ್ಚ ಸುದೀಪ್ ಚಿತ್ರವನ್ನು ನಿರೂಪಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಮಹಿಳಾ ಪ್ರಧಾನವಾಗಿರುವ, ಕ್ರಿಕೆಟ್ ಕುರಿತ ಈ ಚಿತ್ರವನ್ನು ಸಿನಿಪ್ರಿಯರ ಜೊತೆಗೆ ಕ್ರಿಕೆಟ್ ಪ್ರೇಮಿಗಳು ಕೂಡಾ ನೋಡಬಹುದು.
__
Be the first to comment