ಸುನೀಲ್ ಕುಮಾರ್ ವಿ ಎ ನಿರ್ದೇಶನದ ‘ಕಮಲ್ ಶ್ರೀದೇವಿ’ ಚಿತ್ರದಲ್ಲಿ ಸಚಿನ್ ಚೆಲುವರಾಯಸ್ವಾಮಿ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ.
ಸ್ವರ್ಣಾಂಬಿಕಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಧನಲಕ್ಷ್ಮಿ ಬಿ ಕೆ ಚಿತ್ರವನ್ನು ನಿರ್ಮಿಸಲಿದ್ದಾರೆ. ರಾಜವರ್ದನ್ ಅವರ ಬಾರ್ನ್ ಸ್ವಾಲೋ ಸಹ ನಿರ್ಮಾಣದ ಹೊಣೆ ಹೊತ್ತಿದೆ. ಸಚಿವ ಎನ್ ಚಲುವರಾಯಸ್ವಾಮಿ ಚಿತ್ರ ಪ್ರಸ್ತುತಪಡಿಸಿದ್ದಾರೆ.
ಕಮಲ್ ಶ್ರೀದೇವಿ ಚಿತ್ರವನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕಮಲ್ ಶ್ರೀದೇವಿ ಚಿತ್ರದಲ್ಲಿ ರಾಜವರ್ದನ್ ಕ್ರಿಯೇಟೀವ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಕಮಲ್ ಶ್ರೀದೇವಿ’ ಚಿತ್ರ ಈಗಾಗಲೇ ತನ್ನ ಶೀರ್ಷಿಕೆಯಿಂದ ತೀವ್ರ ಕುತೂಹಲ ಮೂಡಿಸಿದೆ.
ಹ್ಯಾಪಿ ಬರ್ತ್‌ಡೇ (2016) ಮತ್ತು ಬೆಂಗಳೂರು ಬಾಯ್ಸ್ (2023) ನಂತರ ಸಚಿನ್ ಚೆಲುವರಾಯಸ್ವಾಮಿ ಅವರ ಮೂರನೇ ಚಿತ್ರ ಇದಾಗಿದೆ. ಎರಡನೇ ಸಲ ಮತ್ತು ಕ್ಲಾಂತ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸಂಗೀತ ಭಟ್ ಸಚಿನ್ ಜೊತೆಯಾಗಿದ್ದಾರೆ. ಚಿತ್ರದಲ್ಲಿ ರಮೇಶ್ ಇಂದಿರಾ, ಮಿತ್ರ ಮತ್ತು ಎಂಎಸ್ ಉಮೇಶ್ ಸೇರಿದಂತೆ ಇತರರು ನಟಿಸಿದ್ದಾರೆ. ನಟ ಕಿಶೋರ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
—-

Be the first to comment