ಅ.23ಕ್ಕೆ S/O ಮುತ್ತಣ್ಣ ಟೀಸರ್‌ ಬಿಡುಗಡೆ

ದೇವರಾಜ್ ಕಿರಿಯ ಪುತ್ರ ಪ್ರಣಂ ದೇವರಾಜ್ ನಟನೆಯ ‘ಸನ್ ಆಫ್‌ ಮುತ್ತಣ್ಣ’ ಚಿತ್ರದ ಟೀಸರ್‌ ಅ.23ಕ್ಕೆ ಬಿಡುಗಡೆಯಾಗಲಿದೆ.

ಶಿವರಾಜ್‌ಕುಮಾರ್‌ ‘ಸನ್ ಆಫ್‌ ಮುತ್ತಣ್ಣ’ ಟೀಸರ್‌ ಬಿಡುಗಡೆ ಮಾಡಲಿದ್ದಾರೆ. ಶ್ರೀಕಾಂತ್‌ ಹುಣಸೂರು ನಿರ್ದೇಶನದ ಸಿನಿಮಾದಲ್ಲಿ ಪ್ರಣಂ ದೇವರಾಜ್‌ ಅವರಿಗೆ ಖುಷಿ ರವಿ ನಾಯಕಿಯಾಗಿ ಜೋಡಿಯಾಗಿದ್ದಾರೆ.

ಶೀರ್ಷಿಕೆಯೇ ಹೇಳುವಂತೆ ‘ಸನ್ ಆಫ್‌ ಮುತ್ತಣ್ಣ’ ಇದೊಂದು ತಂದೆ-ಮಗನ ಬಾಂಧವ್ಯದ ಕಥೆಯಾಗಿದೆ. ರಂಗಾಯಣ ರಘು  ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

‘ಸನ್ ಆಫ್‌ ಮುತ್ತಣ್ಣ’ ಸಿನಿಮಾಗೆ ಸ್ಕೇಟ್ಟಿಂಗ್‌ ಕೃಷ್ಣ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನ, ಸಚಿನ್‌ ಬಸ್ರೂರ್‌ ಸಂಗೀತ ನಿರ್ದೇಶನವಿದೆ. ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಪುರಾತನ ಫಿಲ್ಮಂ ಹಾಗೂ ಎಸ್‌ಆರ್‌ಕೆ ಫಿಲಂಸ್ ಸಹಯೋಗದಲ್ಲಿ  ಚಿತ್ರ ನಿರ್ಮಾಣವಾಗಿದೆ.

S/O ಮುತ್ತಣ್ಣ ಚಿತ್ರದ ಆಡಿಯೊ ಹಕ್ಕು  ಈಗಾಗಲೇ ಮಾರಾಟವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!