‘ಕಮ್ಮಂಗಿ ನನ್ ಮಗನೇʼ ಎಂದು ಹಾಡಿದ ಶರಣ್

ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S\O ಮುತ್ತಣ್ಣ” ಚಿತ್ರಕ್ಕಾಗಿ ಸ್ಯಾಂಡಲ್ ವುಡ್ ಅಧ್ಯಕ್ಷ ನಟ ಶರಣ್ ಹಾಗೂ ಸಂಗೀತ ನಿರ್ದೇಶಕ  ವಿ.ಹರಿಕೃಷ್ಣ ‘ಕಮ್ಮಂಗಿ ನನ್ ಮಗನೇʼ ಎಂದು ಹಾಡಿದ್ದಾರೆ.

“ಕಮ್ಮಂಗಿ ನನ್ ಮಗನೇ” ಎಂಬ ಹಾಡನ್ನು ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಚಿತ್ರದ ಮೊದಲ ಗೀತೆಯಾಗಿ “ಕಮ್ಮಂಗಿ ನನ್ ಮಗನೇ” ಹಾಡು ಮೇ 17 ರಂದು ಬಿಡುಗಡೆಯಾಗಲಿದೆ. ಸಚಿನ್ ಬಸ್ರೂರ್ ಸಂಗೀತ ನೀಡಿದ್ದಾರೆ.

ಯೋಗರಾಜ್ ಭಟ್, ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ “S\O ಮುತ್ತಣ್ಣ” ಚಿತ್ರದ ಈ ಹಾಡಿನಲ್ಲಿ ರಂಗಾಯಣ ರಘು ಹಾಗೂ ಪ್ರಣಂ ದೇವರಾಜ್  ಅಭಿನಯಿಸಿದ್ದಾರೆ.

ಜನಪ್ರಿಯ ಗಾಯಕ ಸಂಚಿತ್ ಹೆಗ್ಡೆ ಕೂಡ “s/o ಮುತ್ತಣ್ಣ” ಚಿತ್ರದ ಹಾಡು ಹಾಡಿದ್ದು, ಹೆಸರಾಂತ ಗಾಯಕಿ ದೀಪ್ತಿ ಸುರೇಶ್ ಇದೇ ಮೊದಲ ಬಾರಿಗೆ ಈ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಪ್ರಸಿದ್ಧ ಗಾಯಕ, ಗಾಯಕಿಯರ ಕಂಠಸಿರಿಯಲ್ಲಿ ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಲಿದೆ ಎಂಬ ಭರವಸೆ “S\O ಮುತ್ತಣ್ಣ” ಚಿತ್ರತಂಡದ್ದು.  ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ.

“S\O ಮುತ್ತಣ್ಣ” ನಾಯಕಿಯಾಗಿ  ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ, ಸಂದೀಪ ಎಂ ತಾರಾಬಳಗದಲ್ಲಿದ್ದಾರೆ.

ತಂದೆ – ಮಗನ ಬಾಂಧವ್ಯದ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಬೆಂಗಳೂರು ಕುಮಾರ್ ವಿತರಣೆ ಮಾಡಲಿದ್ದಾರೆ.  ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಅವರ ಸಂಕಲನ  ಈ ಚಿತ್ರಕ್ಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!