‘ಸನ್‌ ಆಫ್‌ ಮುತ್ತಣ್ಣ’ ಶೀಘ್ರ ತೆರೆಗೆ

ದೇವರಾಜ್ ಕಿರಿಯ ಪುತ್ರ ಪ್ರಣಂ ದೇವರಾಜ್ ನಟನೆಯ ‘ಸನ್ ಆಫ್‌ ಮುತ್ತಣ್ಣ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

”ಬಂಡಿ ಮಹಾಕಾಳಿ ದೇಗುಲದಲ್ಲಿ ಸಿನಿಮಾ ಆರಂಭಿಸಿದ್ದೆವು. ಇಲ್ಲಿಯೇ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ. 49 ದಿನ ಶೂಟಿಂಗ್ ನಡೆಸಲಾಗಿದೆ. ವಾರಾಣಸಿ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ” ಎಂದು ನಿರ್ದೇಶಕ ಶ್ರೀಕಾಂತ್ ಹುಣಸೂರು ತಿಳಿಸಿದ್ದಾರೆ.

”ಈ ಸಿನಿಮಾದ ಪಯಣ ಖುಷಿಯ ಜೊತೆಗೆ ಭಾವನಾತ್ಮಕವಾಗಿಯೂ ಇತ್ತು. ಅಪ್ಪ ಮಗನ ಬಾಂಧವ್ಯದ ಕಥೆ ಇದು. ನಮ್ಮ ಕುಟುಂಬದಲ್ಲಿ ಅಪ್ಪ ಮಗನ ಬಾಂಧವ್ಯ ಹೇಗಿದೆ ಅಂತಾ ಎಲ್ಲರಿಗೂ ಗೊತ್ತಿದೆ. ರಂಗಾಯಣ ರಘು ಅವರು ನನಗೆ ತಂದೆ ರೀತಿ ಸೆಟ್‌ನಲ್ಲಿ ಇದ್ದರು. ಇವರಿಂದ ಸಾಕಷ್ಟು ಕಲಿತಿದ್ದೇನೆ. ಖುಷಿ ಅದ್ಭುತ ನಟಿ” ಎಂದು ಪ್ರಣಂ ಹೇಳಿದ್ದಾರೆ.

ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಖುಷಿ ರವಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ತಾರಾಬಳಗದಲ್ಲಿದ್ದಾರೆ.

ಪುರಾತನ ಫಿಲಂಸ್‌ ಬ್ಯಾನರ್ ಅಡಿಯಲ್ಲಿ ದಿವ್ಯಾ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!