ವಿಜಯ್ ಜಗದಲ್ ನಿರ್ದೇಶಿಸಿ, ನಟಿಸಿರುವ ರೂಪಾಯಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.
ಫೆಬ್ರುವರಿ 10 ರಂದು ಚಿತ್ರಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ವಿಜಯ್ ಜಗದಲ್ ಹಾಡುಗಳಿಗೆ ಸಾಹಿತ್ಯವನ್ನು ಕೂಡಾ ಬರೆದಿದ್ದಾರೆ.
ಹಾಸ್ಯ, ಪ್ರೀತಿ, ಆಕ್ಷನ್ ಮತ್ತು ಭಾವನೆಗಳ ಮಿಶ್ರಣದೊಂದಿಗಿನ ಕಥೆಯ ಸಿನಿಮಾವು ಸಂಬಂಧಗಳು ಮತ್ತು ಹಣದ ಅವಶ್ಯಕತೆಯ ನಡುವಿನ ಜಗ್ಗಾಟದ ಬಗ್ಗೆ ಹೇಳುತ್ತದೆ. ಇದು ದುರಾಸೆ ಮತ್ತು ಜೀವನದ ನಡುವಿನ ಹೋರಾಟದ ಕಥೆ ಹೊಂದಿದ. ಐದು ಪ್ರಮುಖ ಪಾತ್ರಗಳ ಮೂಲಕ ಕಥೆಯನ್ನು ಚಿತ್ರಿಸಲಾಗಿದೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ಫೈಟ್ ಮಾಸ್ಟರ್ ವಿಕ್ರಮ್ ಮೋರ್ ಅವರ ಸ್ಟಂಟ್ ನ್ನು ಚಿತ್ರ ಹೊಂದಿದೆ. ಚಿತ್ರತಂಡ ಇತ್ತೀಚೆಗಷ್ಟೇ ಖಾರಾಬಾತ್ ಎಂಬ ಶೀರ್ಷಿಕೆಯ ಚಿತ್ರದ ಹಾಡನ್ನು ಬಿಡುಗಡೆ ಮಾಡಿದೆ.
ಮಂಜುನಾಥ್ ಎಂ ಮತ್ತು ಹರೀಶ್ ಬಿಕೆ ನಿರ್ಮಾಣದ ರೂಪಾಯಿಯಲ್ಲಿ ಕೃಷಿ ತಾಪಂಡ ಮತ್ತು ಚಂದನಾ ರಾಘವೇಂದ್ರ ನಾಯಕಿಯರಾಗಿದ್ದರೆ. ಮೈತ್ರಿ ಜಗದೀಶ್, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಅನಿಲ್ ಕುಮಾರ್ ಮತ್ತು ಕೃತಿ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಆನಂದ್ ರಾಜವಿಕ್ರಮ್ ಸಂಗೀತ ಮತ್ತು ಆರ್ ಡಿ ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ.
___

Be the first to comment