ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮನೆಯಲ್ಲಿ ಭರ್ಜರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದು ಶೀಘ್ರದಲ್ಲೇ ಈ ಜೋಡಿ ಮದುವೆ ಮುದ್ರೆ ಒತ್ತಲಿದ್ದಾರೆ ಎಂಬ ಗುಲ್ಲೆದಿದೆ.
ಹಳದಿ ಬಣ್ಣದ ಸೀತೆಯುಟ್ಟು ರಶ್ಮಿಕಾ ಮಂದಣ್ಣ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇಷ್ಟವಾದ ಬಣ್ಣ, ಇಷ್ಟವಾದ ಜಾಗ, ಸ್ಪೆಷಲ್ ವ್ಯಕ್ತಿಯಿಂದ ಸಿಕ್ಕ ಸೀರೆ ಹಾಗೂ ಫೋಟೋ ತೆಗೆದವರು ಎಲ್ಲವೂ ಸ್ಪೆಷಲ್ ಅಂತ ರಶ್ಮಿಕಾ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅವರು ಕೊಟ್ಟಿರುವ ಕ್ಯಾಪ್ಷನ್ ಫ್ಯಾನ್ಸ್ ಸಂಭ್ರಮ ದುಪ್ಪಟ್ಟು ಮಾಡಿದೆ.
ರಶ್ಮಿಕಾ ಮಂದಣ್ಣ ತೊಟ್ಟಿರುವ ಸೀರೆ ವಿಜಯ್ ತಾಯಿ ಕೊಟ್ಟಿದ್ದು. ಫೋಟೋ ಸೆರೆಹಿಡಿದದ್ದು ವಿಜಯ್ ದೇವರಕೊಂಡ ಇರಬೇಕು ಎಂಬ ಚರ್ಚೆ ಹುಟ್ಟುಹಾಕಿದೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಏನೋ ಇದೆ ಅನ್ನೋದು ಫ್ಯಾನ್ಸ್‌ಗೆ ಇರುವ ಕ್ಯೂರಿಯಾಸಿಟಿ. ಈ ಜೋಡಿ ಒಟ್ಟಿಗೆ ಡೇಟಿಂಗ್, ಔಟಿಂಗ್ ಅಂತ ಸುತ್ತಾತ್ತಾರೆ. ಶೀಘ್ರದಲ್ಲೇ ಈ ಜೋಡಿ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಇದುವರೆಗೆ ಈ ಜೋಡಿ ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಕೊಂಡಿಲ್ಲ.
—-

Be the first to comment